ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದಲ್ಲಿ ಶುಕ್ರವಾರ ತಾಲೂಕು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ರೈತರಿಗೆ ಯೂರಿಯಾ ಗೊಬ್ಬರ ಮತ್ತು ಬೆಳೆ ಪರಿಹಾರ ನೀಡಲು ಜಿಲ್ಲಾ ಅಧಿಕಾರಿಗಳಿಗೆ ತಹಶೀಲ್ದಾರ ಎಸ್.ಎಂ. ಮ್ಯಾಗೇರಿ ಮುಖಾಂತರ ಮನವಿಯನ್ನು ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಅಧ್ಯಕ್ಷ ಸೋಮು ಬಿರಾದಾರ ಮಾತನಾಡಿ, ಕೊಲ್ಹಾರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ರೈತರಿಗೆ ಯೂರಿಯಾ ಗೊಬ್ಬರ ಒದಗಿಸಿಕೊಡುವುದು ಹಾಗೂ ಮೆಕ್ಕೆಜೋಳ, ಇರುಳ್ಳಿ ಬೆಳೆ ಹಾನಿಗೆ ಫರಿಹಾರ ಕೊಡಬೇಕು ಸದರಿ ರೈತರಾದ ನಾವು ಒಂದು ತಿಂಗಳಿಂದ ನಮಗೆ ಸಮರ್ಪಕವಾಗಿ ನಮ್ಮ ಜಮೀನಿಗೆ ಯೂರಿಯಾ ಗೊಬ್ಬರ ದೊರಕುತ್ತಿಲ್ಲ. ಇದರಿಂದ ನಮಗೆ ತುಂಬಾ ತೊಂದರೆಯಾಗಿರುತ್ತದೆ.
ಅದರಂತೆ ಸತತವಾಗಿ 20-25 ದಿನಗಳಿಂದ ಸತತವಾಗಿ ಅತೀ ಮಳೆಯಿಂದ ಈರುಳ್ಳಿ, ಮೆಕ್ಕೆಜೋಳ ನಾಶವಾಗುತ್ತಿದ್ದು, ಇದರಿಂದ ನಮ್ಮ ರೈತರಿಗೆ ತುಂಬಾ ಹಾನಿಯಾಗಿದ್ದು, ಕಾರಣ ತಾವು ವಿಜಯಪುರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೈತರಿಗೆ ಸಹಾಯ ಸಹಕಾರ ನೀಡಲು ವಿಜಯಪುರ ಜಿಲ್ಲಾಧಿಕಾರಿಗಳು ಹಾಗೂ ಜಂಟಿ ಕೃಷಿ ನಿರ್ದೇಶಕರು ಇವರು ಸೋಮವಾರ ದಿ. 25-08-2025 ರಂದು ತಹಶೀಲ್ದಾರ ಕಚೇರಿ ಮುಂದೆ ನಾವು ನಿರ್ಮಿಸಿದ ವೇದಿಕೆಗೆ ಬಂದು ನಮ್ಮ ಜೊತೆ ಸಂವಾದ ಮಾಡಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. ಇಲ್ಲದಿದ್ದರೆ ನಾವು ಅದೇ ದಿನದಂದು ಮುಂಜಾನೆ 10.30 ಗಂಟೆಗೆ ಕೊಲ್ಹಾರ ತಹಶೀಲ್ದಾರ ಕಚೇರಿ ಮುಂದೆ ಸುಮಾರು ಮದ್ಯಾಹ್ನ 1-00 ಗಂಟೆಗೆ ನಾವೇಲ್ಲ ರೈತರು ಕೂಡಿ ಕೊಂಡು ರಾಷ್ಟ್ರೀಯ ಹೆದ್ದಾರಿ ತಡೆದು ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಶಿಕಾಂತ ಬಿರಾದಾರ, ಮುದಕಪ್ಪ ಚಲವಾದಿ, ಶ್ರೀಶೈಲ ಬೆಣ್ಣೂರ, ಗೋಪಾಲ ಕಾಖಂಡಕಿ, ಕಲ್ಲಪ್ಪ ಗಿಡ್ಡಪ್ಪಗೋಳ, ಬಸವರಾಜ ನ್ಯಾಮಗೊಂಡ, ಗುಳಪ್ಪ ಗುಗ್ಗರಿ, ಸತ್ಯಪ್ಪ ಕುಳೊಳ್ಳಿ ಹಲವು ರೈತರು ಪಾಲ್ಗೊಂಡಿದ್ದರು.