ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯಗಳ ಅವಶ್ಯಕತೆ ಇದೆ ಮತ್ತು ಮಕ್ಕಳ ಬೆಳವಣಿಗೆಯಲ್ಲಿ ತಾಯಿ ಪಾತ್ರ ಮಹತ್ವದ್ದು. ತಾಯಿ ಮನೆಯ ಮೊದಲ ಡಾಕ್ಟರ್ ಇದ್ದಂಗ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಬಾಲಗೊಂಡ ಹೇಳಿದರು.
ಪಟ್ಟಣದ ಶ್ರೀ ವಿಠ್ಠಲ ಮಂದಿರ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್ ಹಾಗೂ ತಾಲೂಕು ಮಹಿಳಾ ಜ್ಞಾನ ವಿಕಾಸ ಸಹಯೋಗದಲ್ಲಿ ಪೌಷ್ಟಿಕ ಆಹಾರ ಮೇಳ ಶುಕ್ರವಾರ ಹಮ್ಮಿಕೊಂಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದ ಮಹಿಳೆಯರ ಸಬಲೀಕರಣದ ಜೋತೆಗೆ ಆಹಾರ ಮೇಳ ಹಮ್ಮಿಕೊಂಡಿದ್ದು ಆಹಾರ ಮತ್ತು ಶುಚಿತ್ವದ ಬಗ್ಗೆ ಮಾಹಿತಿ ನೀಡಲು ಉತ್ತಮ ವೇದಿಕೆ ಯಾಗುತ್ತದೆ ಎಂದರು.
ತಾಲೂಕು ಜ್ಞಾನ ವಿಕಾಸ ಕೇಂದ್ರ ಮುಖ್ಯಸ್ಥರು ಶ್ರೀದೇವಿ ಕಾಳಿಸಿಂಗೆ ಮಾತನಾಡಿ ಕುಟುಂಬ ಸದಸ್ಯರ ಕಲ್ಯಾಣ ಮನೆಯ ಒಡತಿಯ ಕೈಯಲ್ಲಿ ಇದೆ. ಆಧುನಿಕ ಯುಗದಲ್ಲಿ ಉತ್ತಮ ಆರೋಗ್ಯ ಉತ್ತಮ ಸಂಪತ್ತು ಇದ್ದ ಹಾಗೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚ ಗ್ಯಾರಂಟಿ ಸಮಿತಿ ಸದಸ್ಯೆ ಕಮಲಾಬಾಯಿ ಮಾಕಾಳಿ, ತಾಲೂಕು ಸಮನ್ವಯ ಅಧಿಕಾರಿ ಸಂಗೀತಾ ಮಡಿವಾಳ, ಕಿರಣ, ಈರಮ್ಮ ಮಠಪತಿ, ಸಕ್ಕುಬಾಯಿ ಕಟಬರ, ಭಾರತಿ ಕಟಬರ, ಸ್ಮೀತಾ ಕರಣೆ, ಶಿವಾಣಿ ಗಣಾಚಾರಿ, ಅನಿತಾ ಮಾಳದಕರ ಉಪಸ್ಥಿತರಿದ್ದರು.