ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತ್ಯಾಗ ಬಲಿದಾನದ ಸಂಕೇತವಾಗಿರುವ ಸ್ವಾತಂತ್ರ್ಯವನ್ನು ನಾವೆಲ್ಲ ರಾಷ್ಟ್ರ ಭಕ್ತಿಯ ಮೂಲಕ ಕಾಪಾಡಿಕೊಂಡು ಹೋಗಬೇಕೆಂದು ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಹಮೀದ ಮುಶ್ರೀಫ ಹೇಳಿದರು.
ನಗರದ ಶಿಖಾರಖಾನೆ ಸೇರಿದಂತೆ ವಿವಿಧ ಕಡೆ 79ನೇ ಸ್ವಾತಂತ್ರ್ಯ ದಿನಾಚರಣೆ ರಾಷ್ಟ್ರ ದ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ರಾಷ್ಟ್ರ ನಿರ್ಮಾಣದಲ್ಲಿ ನಿಸ್ವಾರ್ಥ ಸೇವೆ ನಮ್ಮ ಆದ್ಯ ಕರ್ತವ್ಯವಾಗಬೇಕೆಂದರು.
ಮುಖಂಡರಾದ ಮಹಾದೇವ ರಾವಜಿ, ಅಕ್ರಮ ಮಾಶಾಳಕರ, ಶಬ್ಬಿರಪಟೇಲ, ಅಬೀದ್ ಸಂಗಮ, ಜವಾಹರ ಗೋಸಾವಿ, ಹೊನುಟಗಿ, ಅಬ್ದುಲ್ ಅಜೀಜ, ನ್ಯಾಯವಾದಿ ಹಾಜಿ ಪಿಂಜಾರ ಸೇರಿದಂತೆ ಗಣ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.

