ಉದಯರಶ್ಮಿ ದಿನಪತ್ರಿಕೆ
ಮುದ್ದೆಬಿಹಾಳ: ತಾಲೂಕಿನ ಬಿದರಕುಂದಿ ಗ್ರಾಮದ ಆರ್.ಎಂ.ಎಸ್.ಎ ಶಾಲೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಶಾಲೆಯ ನೂತನ ಎಸ್.ಡಿ.ಎಂ.ಸಿ ಪದಾಧಿಕಾರಿಗಳು ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಸದಸ್ಯರಾದ ಬಂದೇನವಾಜ ಕುಮಸಿ ಅವರು ಮಾತನಾಡಿ, ಶಾಲೆಯು ಮೂಲಭೂತ ಸೌಲಭ್ಯಗಳಿಂದ ಕುಂಠಿತವಾಗಿದೆ. ಸಧ್ಯ ಶಾಲೆಯಲ್ಲಿ ೫೫೦ ರಷ್ಟು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಿಗೆ ಖಾಯಂ ಶಿಕ್ಷಕರ ಕೊರತೆ ಇದ್ದು ನೇಮಕಾತಿ ಅವಶ್ಯಕತೆ ಇದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಹೈಟೆಕ್ ಶೌಚಾಲಯ, ಬಿಸಿ ಊಟದ ಕೋಣೆ ಮತ್ತು ೬೦೦ ಮಕ್ಕಳು ಒಂದೆ ಬಾರಿಗೆ ಕುಳಿತು ಊಟ ಮಾಡುವಷ್ಟು ಭೋಜನಾಲಯ ಅವಶ್ಯಕತೆ ಇದೆ. ಕುಡಿವ ನೀರು, ಒಳಚರಂಡಿ ಸೌಲಭ್ಯ ಒದಗಿಸಬೇಕು. ಮಕ್ಕಳಿಗೆ ಆಟವಾಡಲು ಸಮತಟ್ಟಾದ ಮೈದಾನ ಮತ್ತು ಶಾಲಾ ಸೌಂಧರ್ಯ ಹೆಚ್ಚಿಸಲು ಉದ್ಯಾನವನ ನಿರ್ಮಾಣ ಮಾಡಬೇಕು. ಶಾಲೆಗೆ ಕಲ್ಪಿಸುವ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ದುರಸ್ಥಿಗೊಳಿಸಿಕೊಡುವಂತೆ ಎಂದು ಶಾಸಕ ನಾಡಗೌಡರಲ್ಲಿ ಮನವಿ ಮಾಡಿಕೊಂಡರು.
ಮನವಿಯನ್ನು ಸ್ವೀಕರಿಸಿದ ಶಾಸಕರು ಬೇಡಿಕೆಗಳು ಅತ್ಯಂತ ಮಹತ್ವದ್ದವುಗಳಾಗಿದ್ದು ಈಡೇರಿಸಿ ಕೊಡುವದಾಗಿ ಎಂದು ಭರವಸೆ ನೀಡಿ, ನೂತನ ಅಧ್ಯಕ್ಷೆ ಪೂರ್ಣಿಮಾ ಬೆಳಗಲ್ಲ ಅವರನ್ನು ಸ್ನಮಾನಿಸಿ ಗೌರವಿಸಿದರು.
ಈ ವೇಳೆ ಸದಸ್ಯರಾದ ಮನೋಹರ ಪಾಟೀಲ, ನಿಂಗನಗೌಡ ಬಿರಾದಾರ, ಯಲ್ಲಪ್ಪ ಮ್ಯಾಗೇರಿ, ಮಂಜುಳಾ ಹಡಗಲಿ, ನಿಂಗನಗೌಡ ಬಿರಾದಾರ (ಅಪ್ಪು), ಗೀತಾ ನಾಲತವಾಡ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್, ಮುಖ್ಯಗುರು ಅನೀಲಕುಮಾರ ರಾಠೋಡ, ಸಿಬ್ಬಂದಿಗಳಾದ ಎನ್.ಎಸ್.ಬಿರಾದಾರ, ಸಂಗಮೇಶ ಸಜ್ಜನ ಸೇರಿದಂತೆ ಮತ್ತೀತರರು ಇದ್ದರು.

