ವಿಜಯಪುರ: ಶೆಪರ್ಡ್ ಇಂಡಿಯಾ ಇಂಟರ್ನ್ಯಾಶನಲ್ ನೇತೃತ್ವ ವಹಿಸಿದ ಎಚ್ ವಿಶ್ವನಾಥ ಹಾಗೂ ಎಚ್.ಎಮ್ ರೇವಣ್ಣನವರ ಆದೇಶದ ಮೇರೆಗೆ ವಿಜಯಪುರ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಆಲಮೇಲದ ರಮೇಶ ಬಂಟನೂರ ಆಯ್ಕೆಯಾಗಿದ್ದಾರೆ.
ನಗರದಲ್ಲಿ ಜಿಲ್ಲಾ ಹಾಲುಮತ ಸಮಾಜದ ಗಣ್ಯರಿಂದ ಸನ್ಮಾನ ಸ್ವೀಕರಿಸಿದ ರಮೇಶ ಬಂಟನೂರ ಮಾತನಾಡಿ, ಅ.೦೩ ರಂದು ಬೆಳಗಾವಿ ನಗರದಲ್ಲಿ ಶೆಪರ್ಡ್ ಇಂಡಿಯಾ ಇಂಟರ್ನ್ಯಾಷನಲ್ ಸಮಿತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಷ್ಟ್ರೀಯ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಹಾಲುಮತ ಸಮಾಜದ ಬಂಧುಗಳು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿಕೊಂಡರು.
ಈ ವೇಳೆ ಜಿಲ್ಲಾ ಹಾಲುಮತ ಸಮಾಜದ ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ, ರಾಜ್ಯ ಕಾರ್ಯದರ್ಶಿ ರಾಜೇಶ್ವರಿ ಯರನಾಳ, ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ರಾಜು ಕಂಬಾಗಿ, ಮೋಹನ್ ಮೇಟಿ, ವಕೀಲರಾದ ಗುರಣಗೌಡ ಪಾಟೀಲ, ಮನು ಭಾವಿಕಟ್ಟಿ, ಮೋಹನ ದಳವಾಯಿ, ಸಿದ್ದ ಅಧ್ಯಕ್ಷ ರಾಜು ಕಗ್ಗೋಡ, ಶಿವಲೀಲಾ ಕಂಬಾಗಿ, ಪತ್ರಕರ್ತ ಬಸವರಾಜ ಕಂಕಣವಾಡಿ ಹಾಗೂ ಜಿಲ್ಲಾ ಕುರುಬರ ಸಂಘದ ನಿರ್ದೇಶಕ ದೇವಕಾಂತ ಬಿಜ್ಜರಗಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

