ವಿಜಯಪುರ: ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಪ್ರವಾಸೋದ್ಯಮ ಇಲಾಖೆ ಮತ್ತು ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದಿಂದ ಬೇಗಂ ತಲಾಬ್ ಆವರಣದಲ್ಲಿ ಏರ್ಪಡಿಸಲಾದ ಛಾಯಾಚಿತ್ರ ಪ್ರದರ್ಶನವನ್ನು ಜಿಲ್ಲಾಧಿಕಾರಿ ಟಿ.ಭೂಬಾಲನ್ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಛಾಯಾಚಿತ್ರ ಕಲಾವಿದರು ಐತಿಹಾಸಿಕ ನಗರದ ಸ್ಮಾರಕಗಳನ್ನು ತಮ್ಮ ಕ್ಯಾಮರಾಕಣ್ಣಿನಿಂದ ಅತ್ಯುತ್ತಮವಾಗಿ ಸೆರೆಹಿಡಿದು ಕಲಾಸಕ್ತರಿಗೆ ಅದರ ಕಲಾಕತ್ಮಕತೆಯನ್ನು ತೋರಿಸಿದ್ದಾರೆ. ಇಂಥಹ ಪ್ರದರ್ಶನ, ಕಾರ್ಯಕ್ರಮಗಳು ನಿರಂತರವಾಗಿ ನಡೆಯುವಂತಾಗಲಿ. ಇದರಿಂದ ಪ್ರವಾಸೋದ್ಯಮಕ್ಕೆ ಪ್ರವಾಸಿಗರಿಗೆ ಅನುಕೂಲವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಪ್ರಶಸ್ತಿ ವಿಜೇತರಾದ ಡಾ. ಗಂಗಾಧರ ತಿಮ್ಮಾಪೂರ ಪ್ರಥಮ, ಪ್ರಭಾಕರ ಅರಕೇರಿ ದ್ವೀತಿಯ, ಪವನಕುಮಾರ ಅಂಗಡಿ ತೃತೀಯ ಮತ್ತು ಗುರುಬಾಳಪ್ಪಾ ಗಲಗಲಿ ಮತ್ತು ಪ್ರಮೋದ ಕಾಜಗಾರ ಇವರಿಗೆ ಸಮಾಧಾನಕರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರದರ್ಶನದಲ್ಲಿ ಪ್ರಶಾಂತ ಪಟ್ಟಣಶೆಟ್ಟಿ, ಪರಶುರಾಮ ಮಾದರ, ಸತೀಶ ಕಲಾಲ, ಬಳವಂತರಾವ್ ಕುಲಕರ್ಣಿ, ರಾಜುಸಿಂಗ್ ರಜಪೂತ, ಚಿರಾಗ ಅಕ್ಕಿ, ಅಲ್ತಾಫ್ ಮಧಭಾವಿ, ಬಸವರಾಜ ಸರ್ಜಾಪುರ, ಅನಂತ ಭೋಸಲೆ, ಗೌಡಪ್ಪಗೌಡ ಬಿರಾದಾರ ಮತ್ತು ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದ ಅದ್ಯಕ್ಷ ರಮೇಶ ಚವ್ಹಾಣ ಇವರ ಛಾಯಾಚಿತ್ರಗಳು ನೋಡುಗರ ಮನತಣಿಸುವಲ್ಲಿ ಯಶಸ್ವಿಯಾದವು.
Subscribe to Updates
Get the latest creative news from FooBar about art, design and business.
Related Posts
Add A Comment