ಕಾವೇರಿ ಹೋರಾಟಕ್ಕೆ ಬೆಂಬಲ |ವಿಜಯಪುರ-ಬೆಂಗಳೂರು ಹೆದ್ದಾರಿ ಬಂದ್ | ಸಂಚಾರ ಅಸ್ತವ್ಯಸ್ತ
ವಿಜಯಪುರ: ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವುದನ್ನು ವಿರೋಧಿಸಿ ಇಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ವಿಜಯಪುರ -ಬೆಂಗಳೂರು ಹೆದ್ದೂರಿ ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿ ದಕ್ಷಿಣ ಕರ್ನಾಟಕದ ರೈತರ ಸಮಸ್ಯೆಗಳಿಗೆ ಉತ್ತರದವರೂ ನಾವೂ ಎಲ್ಲರೂ ಒಂದೇ ಎಂಭ ಭಾವನೆಯೊಂದಿಗೆ ಬೆಂಬಲ ಸೂಚಿಸುತ್ತಿದ್ದೇವೆ, ನೀವೂ ಕೂಡಾ ನಮ್ಮ ಸಮಸ್ಯೆಗಳಿಗೆ ನಮ್ಮೊಂದಿಗೆ ಕೈ ಜೋಡಿಸುವಂತೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಹೇಳಿದರು.
ಮುಂಬರುವ ಲೋಕಸಭಾ ಚುನಾವಣಾ ದೃಷ್ಟಿಯಿಂದ ತಮಿಳುನಾಡಿಗೆ ನೀರು ಬಿಡುತ್ತಿರುವ ರಾಜ್ಯ ಹಾಗೂ ಕೇಂದ್ರ
ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ ಕುಬಕಡ್ಡಿ ಮಾತನಾಡಿ, ನಮ್ಮ ರೈತರಿಗೆ ಜನ ಜಾನುವಾರುಗಳಿಗೆ, ವ್ಯವಸಾಯಕ್ಕೆ ಕುಡಿಯಲಿಕ್ಕೆ ಇಲ್ಲದಿರುವ ಸಂದರ್ಭದಲ್ಲಿ ಮತ್ತೊಬ್ಬರಿಗೆ ನೀರು ಕೊಡುವುದೆಂದರೆ ಹಾಸ್ಯದ ಸಂಗತಿ. ತಮಿಳುನಾಡಿನಲ್ಲಿ ಈ ಬಾರಿ ಸಾಕಷ್ಟು ಮಳೆಯಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಈ ಭಾರಿ ಮುಂಗಾರು ಸಂಪೂರ್ಣ ಕೈಕೊಟ್ಟಿದೆ. ಆದ್ದರಿಂದ ಮೊದಲು ಮುಂಬರುವ ಬೇಸಿಗೆ ಗಮನದಲ್ಲಿಕೊಂಡು ನೀರು ಹೆಚ್ಚಿದ್ದರೆ ಬಿಡಲಿ ಎಂದರು.
ಈ ಸಂದರ್ಭದಲ್ಲಿ ಕೊಲಾರ ಅಧ್ಯಕ್ಷ ಸೋಮು ಬಿರಾದಾರ, ತಾಳಿಕೊಟಿ ಅಧ್ಯಕ್ಷ ಶ್ರೀಶೈಲ ವಾಲಿಕಾರ, ಆಲಮೇಲ ಅಧ್ಯಕ್ಷ ಈರಣ್ಣ ಕಲ್ಲೂರು, ಬಾಷಾ ಮನಗೂಳಿ, ಹಣಮಂತ ಬ್ಯಾಡಗಿ, ನಜೀರ ನಂದರಗಿ, ಶಾನೂರ ನಂದರಗಿ, ರೇಖಾ ಪಾಟೀಲ , ವಿಜಯಲಕ್ಷ್ಮಿ ಗಾಯಕವಾಡ, ರೈತ ಮುಖಂಡರು ಉಪಸ್ಥಿತರಿದ್ದರು.