ವಿಜಯಪುರ: ಕಾವೇರಿ ಮತ್ತು ಮಹಾದಾಯಿ ನದಿ ನೀರು ಹಂಚಿಕೆಯ ಕುರಿತು ಖಂಡಿಸಿ ಜಯ ಕರ್ನಾಟಕ ಸಂಘಟನೆಯ ವತಿಯಿಂದ ರಾಜ್ಯದ ಮುಖ್ಯಮಂತ್ರಿಗಳಿಗೆ ಕಲ್ಲು ತಲೆಯ ಮೇಲೆ ಹೊತ್ತು ಪ್ರತಿಭಟಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಯಿತು.
ಕಾವೇರಿ ಮತ್ತು ಮಹಾದಾಯಿ ನದಿ ನೀರಿನ ವಿಚಾರವಾಗಿ ಹಲವು ದಶಕಗಳಿಂದ ನಮ್ಮ ರಾಜ್ಯದಲ್ಲಿ ಹೋರಾಟ ನಡೆಯುತ್ತಿದ್ದು ಈವರೆಗೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಿಲ್ಲ. ಸಮಸ್ಯೆ ಬಗೆಹರಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಿಡಬ್ಲ್ಯೂಆರ್‌ಸಿ ವನ್ನು ರಚನೆ ಮಾಡಿದ್ದು ಅಧಿಕಾರಿ ಮಂಡಳಿಯ ಆದೇಶದಂತೆ ನೀರು ಬಿಡುತ್ತಿದ್ದು, ರಾಜ್ಯದಲ್ಲಿ ಮಳೆಯ ಅಭಾವದಿಂದ ಡ್ಯಾಮ್ ನಲ್ಲಿ ನೀರು ಶೇಖರಣೆ ಇಲ್ಲದಿದ್ದರೂ ವಾಸ್ತವಾಂಶವನ್ನು ಪರಿಗಣಿಸದೆ ತಮಿಳುನಾಡಿಗೆ ನೀರು ಬಿಡುತ್ತಿರುವುದು ಖಂಡನೀಯ ಎಂದರು.
ಈ ವಿಚಾರದಲ್ಲಿ ಪುಧಾನ ಮಂತ್ರಿಗಳು ಮಧ್ಯ ಪ್ರವೇಶಿಸಿ ಸಂಕಷ್ಟ ಸೂತ್ರ ಪಾಲಿಸುವಂತ ನಿಯಮ ರೂಪಿಸಲು ನಮ್ಮ ಸಂಸದರು ಒತ್ತಾಯ ಮಾಡಬೇಕು. ನಮ್ಮ ನಾಡಿನ ಕಾವೇರಿ ಮತ್ತು ಮಹದಾಯಿ ಇನ್ನಿತರ ನದಿ ನೀರಿನ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಮಸ್ಯೆಗಳಿಗೆ ಶಾಶ್ವತ ಪರಿಹರಿಸುವಂತೆ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮಹೇಶ ನಾಯಕ, ಉಪಾಧ್ಯಕ್ಷ ಪಿಂಟು ಗಬ್ಬೂರ, ಪ್ರಧಾನ ಕಾರ್ಯದರ್ಶಿ ಚನ್ನಪ್ಪಗೌಡ ಬಿರಾದಾರ, ಸಂಘಟನಾ ಕಾರ್ಯದರ್ಶಿ ರಿಯಾಜ ಪಾಂಡು, ಶರಣು ಹೂಗಾರ, ಸಂತೋಷ ಮನಗೂಳಿ, ಶ್ರೀಶೈಲ ಪಾಟೀಲ, ಹುಸೇನಬಾನು ಹತ್ತರಕಿಹಾಳ, ಕವಿತಾ ಅಳ್ಳೊಳ್ಳಿ, ಸಾವಿತ್ರಿ ಖಡಂಕರ, ಬೇಬಿ ತಳವಾರ, ಶಕುಂತಲಾ ಚವ್ಹಾಣ, ಹೊನ್ನಕ್ಕ ಕೋಳಿ, ಸುವರ್ಣ ಹಳ್ಳಿ, ನಾಗಮ್ಮ ವಾಲಿಕಾರ, ನೀಲಮ್ಮ ಬಿರಾದಾರ, ಸುಜಾತಾ ಪೂಜಾರಿ, ಅಶ್ವಿನಿ ಸಾವಂತ, ಮಲ್ಲಮ್ಮಾ ಲಮಾಣಿ, ಮಂಜುನಾಥ ಪತ್ತಾರ, ಭೀಮಣ್ಣ ಯಳಮೇಲಿ, ಶರಣು ಮನಗೂಳಿ, ಕೃಷ್ಣಾ ಚವ್ಹಾಣ, ಉಮೇಶ ರುದ್ರಮಣಿ, ಇನ್ನಿತರರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment