ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ತಾಲೂಕಿನ ಗುಬ್ಬೇವಾಡ ಗ್ರಾಮದಲ್ಲಿ ಬಸವೇಶ್ವರ ದೇವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ತ ಕಲಬುರಗಿ ಶ್ರೀ ಶರಣ ಬಸವೇಶ್ವರ ಮಹಾಪುರಾಣವನ್ನು ಜು.೨೫ ರಿಂದ ಆ.೨೮ರವರೆಗೆ ಆಯೋಜನೆ ಮಾಡಲಾಗಿದ್ದು, ಖಾಕಂಡಕಿಯ ಪಂಡಿತ ಶಿವಾನಂದ ಶಾಸ್ತಿçಗಳು ಪ್ರವಚನ ನೀಡಲಿದ್ದಾರೆ. ಸಂಗೀತ ಸೇವೆಯನ್ನು ರಾಜಶೇಖರ ಹುಲ್ಲೂರು, ತಬಲಾ ವಾದಕರಾಗಿ ಮಾಹಾಂತೇಶ ಹುಲ್ಲೂರು, ನಂದಿ ಸೇವೆಯನ್ನು ವೀರಭದ್ರಪ್ಪ ಕ. ಮಂಗಲಗಿ ವಹಿಸಿಕೊಳ್ಳಲಿದ್ದಾರೆ. ಹಾಗಾಗಿ ಸಮಸ್ತ ಗುಬ್ಬೇವಾಡ ಗ್ರಾಮಸ್ಥರು, ಭಕ್ತಾದಿಗಳು ಮತ್ತು ಸಾರ್ವಜನಿಕರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಸವೇಶ್ವರರ ಕೃಪೆಗೆ ಪಾತ್ರರಾಗಬೇಕೆಂದು ಬಸವೇಶ್ವರ ಯುವಕ ಸಂಘ, ದೇವಸ್ಥಾನದ ಕಮಿಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
