ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಜಕೀಯ ದುರುದ್ದೇಶದಿಂದ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ವಿರುದ್ಧ ದಾಖಲಿಸಿದ್ದ ಅರ್ಜಿಯನ್ನು ಕರ್ನಾಟಕ ಸರ್ವೋಚ್ಛ ನ್ಯಾಯಾಲಯವು ಇದೇ ಜು.18 ಶುಕ್ರವಾರ ದಂದು ವಜಾಗೊಳಿಸಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ನಗರ ಶಾಸಕರ ವಿರುದ್ಧ ಸೋಲು ಕಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ್ ಖಾಜಾಸಾಬ್ ಮುಶ್ರೀಪ್, ಹತಾಶನಾಗಿ 2023 ರ ಜೂನ್ 23 ರಂದು ದೂರು ನೀಡಿದ್ದರು. ಇದನ್ನು 2023ರ ಜುಲೈ 12 ರಂದು ಮಾನ್ಯ ಹೈಕೋರ್ಟ ಅರ್ಜಿ ವಜಾಗೊಳಿಸಿದಲ್ಲದೆ, ರೂ.1 ಲಕ್ಷ ದಂಡ ಹಾಕಿ ಛಿಮಾರಿ ಹಾಕಿತ್ತು. ಹೈಕೋರ್ಟ ತೀರ್ಪು ಪ್ರಶ್ನಿಸಿ ಮತ್ತೆ ಮಾನ್ಯ ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಮೇಲ್ಮನವಿಯನ್ನು ಸಹ ನ್ಯಾಯಾಲಯವು ವಜಾಗೊಳಿಸಿದೆ. ಇದರಿಂದ ಸುಳ್ಳು ಆರೋಪ ಮಾಡಿ ವಿನಾಕಾರಣ ನ್ಯಾಯಾಲಯದ ಸಮಯ ವ್ಯರ್ಥ ಮಾಡಿರುವ ಇವರಿಗೆ ಮುಖಭಂಗವಾದಂತಾಗಿದೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.
