ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಗ್ರಾಮದ ಬ್ಯಾಂಕ್ ಆಪ್ ಬರೋಡಾ ಶಾಖೆಯಲ್ಲಿ ೧೧೮ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ವ್ಯವಾಸ್ಥಾಪಕರಾದ ಅನೀಲಕುಮಾರ ಮಾತನಾಡಿ, ಸತತವಾಗಿ ೧೧೮ ವರ್ಷಗಳಿಂದ ಉತ್ತಮ ಗ್ರಾಹಕರ ಸ್ನೇಹಿ ಸೇವೆ ಸಲ್ಲಿಸುತ್ತಿರುವ ಬ್ಯಾಂಕ ಹತ್ತಾರು ಲಾಭದಾಯಕವಾದ ಉಳಿತಾಯ ಯೋಜನೆಗಳನ್ನು ತಂದಿದ್ದು ಗ್ರಾಹಕರು ಇದರ ಸದುಪಯೋಗ ಪಡೆಯಬೇಕೆಂದರು.
ಈ ಸಂದರ್ಭದಲ್ಲಿ ಕಿರಿಯ ವ್ಯವಸ್ಥಾಪಕ ಚಂದ್ರಶೇಖರ ರಾಠೋಡ, ನಿಂಗಪ್ಪ ಭಜಂತ್ರಿ, ಬ್ಯಾಂಕ ಸಿಬ್ಬಂದಿಗಳಾದ ಗೂಳಪ್ಪ ವಡ್ಡೋಡಗಿ, ಗುರುರಾಜ ಅಡಕಿ, ಸಾಯಿ ನಾಯಕ್, ಮಹಾಂತೇಶ ಹಿಪ್ಪರಗಿ, ಪ್ರಜ್ವಲ್ ಅಡಕಿ, ಪ್ರಮೋದ ಬಿರಾದಾರ, ಯಲಗೂರಪ್ಪ ವಡ್ಡೋಡಗಿ, ಮೌನೇಶ ಅರಕೇರಿ ಉಪಸ್ಥಿತರಿದ್ದರು.

