ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ್ವರ ಬಬಲೇಶ್ವರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಸಾಮಾನ್ಯ ಕಾನೂನಿನ ಅರಿವು ವ್ಯಾಪಕವಾಗಿ ಹದಿಹರೆಯದ ಮಕ್ಕಳ ಪಠ್ಯಕ್ರಮದಲ್ಲಿ ಅಳವಡಿಕೆಯಾದಾಗ ಮಾತ್ರವೇ ದೇಶದ ಬದಲಾವಣೆ ಸಾಧ್ಯ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ್ವರ ಬಬಲೇಶ್ವರ ಹೇಳಿದರು.
ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಸಮೂಹ ವಿದ್ಯಾ ಸಂಸ್ಥೆಯಲ್ಲಿ ನಡೆದ ವಿದ್ಯಾ ಭಾರತಿ ಕರ್ನಾಟಕ ವಿಜಯಪುರ ಜಿಲ್ಲಾ ಸಂಕುಲಗಳ ಶಾಲೆಗಳ ೨೦೨೫-೨೬ನೇ ಸಾಲಿನ ಶೈಕ್ಷಣಿಕ ಸಹಮಿಲನದಲ್ಲಿ ಕಾರ್ಯಕ್ರಮವನ್ನು ಉದ್ಘಾಟಸಿ ಅವರು ಮಾತನಾಡಿದರು.
ಸಂಸ್ಕಾರದ ಆಯ್ಕೆಯಲ್ಲಿ ಬದುಕಿನ ಉಸಿರು ಅಡಗಿರುತ್ತದೆ. ತಾಯಿ, ರೈತ, ಶಿಕ್ಷಕರುಗಳಿಗೆ ಯಾವುದೇ ಜಾತಿ, ಬೇಧ-ಭಾವ ಸಂಕೋಲೆಗಳ ಬಂಧನವಿಲ್ಲ. ಸಮಾಜದ ಅನಿಷ್ಠ ಪದ್ಧತಿ ದೂರವಾಗಬೇಕಾದರೆ ವಿದ್ಯಾರ್ಥಿ ದೆಸೆಯಲ್ಲಿಯೆ ವ್ಯಾಸಂಗ ಮಾಡಿರಬೇಕು ಎಂದರು.
ಕೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಮಾತನಾಡಿ ವಿದ್ಯಾ ಭಾರತಿ ಸಂಕುಲಗಳು ಭಾರತೀಯ ಚಿಂತನೆಗಳನ್ನು ಎತ್ತರಿಸುವ ಪ್ರಯತ್ನ ಮಾಡುತ್ತಿದೆ. ನಮ್ಮೆಲ್ಲರಲ್ಲಿ ನಾವೆಲ್ಲ ಒಂದು ಎನ್ನುವ ಭಾವೆನೆ ಸದಾ ಇರಬೇಕು. ಶಿಕ್ಷಕರು ತಮ್ಮಲ್ಲಿ ವಿದ್ಯಾರ್ಥಿಗಳನ್ನ ವಿವಿಧ ಕ್ಷೇತ್ರದ ಬೆಳವಣಿಗೆಗೆ ಬೇಕಾದ ತ್ಯಾಗಕ್ಕೆ ಸಿದ್ದರಾಗುವ , ರೈತರನ್ನು ಹಾಗೂ ಶಿಕ್ಷಕರನ್ನು ತಯಾರುಮಾಡಬೇಕಾಗಿದೆ. ಮಕ್ಕಳನ್ನು ದೇಶದ ರತ್ನವನ್ನಾಗಿ ತಯಾರುಮಾಡುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಕಾರ್ಯ ಕಾರಿಣಿ ಸದಸ್ಯರಾದ ನಾಗೇಶ ಚಿನ್ನಾರೆಡ್ಡಿ ಪಂಚ ಪರಿವರ್ತನೆ ವಿಷಯದ ಮೇಲೆ ಉಪನ್ಯಾಸ ನೀಡುತ್ತಾ, ಅಪ್ರಜ್ಞೆಯ ಬದುಕನ್ನು ಬದುಕ ಬಾರದು. ಪೂರ್ವಜರು ಪರಿಸರವನ್ನು ಭಗವಂತನ ರೂಪದಲ್ಲಿ ಪೂಜಿಸುತ್ತಿದ್ದರು. ಪ್ರಕೃತಿಯ ಋಣವನ್ನು ತೀರಿಸಲು ಸಾಧ್ಯವಿಲ್ಲ ಎಂದರು.
ಈ ವೇಳೆ ವಿದ್ಯಾ ಭಾರತಿ ಜಿಲ್ಲಾ ಅಧ್ಯಕ್ಷ ಪ್ರಭು ಕಡಿ, ಪ್ರಾಂತ ವಿದ್ಯಾ ಭಾರತಿ ಕಾರ್ಯದರ್ಶಿ ವಸಂತ ಮಾಧವ, ಜ್ಞಾನ ಭಾರತಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಬಿ.ಪಿ.ಕುಲಕರ್ಣಿ, ವಿದ್ಯಾ ಭಾರತಿ ಜಿಲ್ಲಾ ಉಪಾಧ್ಯಕ್ಷರಾದ ಚಂದ್ರಶೇಖರ ಕವಟಗಿ, ದಿ ಕರ್ನಾಟಕ ಬ್ಯಾಂಕ್ ನಿರ್ದೇಶಕ ಸತೀಶ ಓಸ್ವಾಲ್, ಗಣ್ಯರಾದ ಪ್ರಾಣೇಶ ಜೋಶಿ, ಸಲಬಣ್ಣ ಗಚ್ಚಿನವರ್, ರಾಜಶೇಖರ ಉಮರಾಣಿ, ಶಿವನಗೌಡ ಪಾಟೀಲ್, ರಾಜಶೇಖರ ಪಾಟೀಲ್, ರಮೇಶ ಅರಸನಾಳ, ಡಾ. ಎಸ್.ಬಿ.ವಡವಡಗಿ, ಎಲ್.ಎಸ್.ಗುರವ್ಹ್, ಮಾಣಿಕಚಂದ ದಂಡಾವತಿ, ಸೋಮನಗೌಡ ಸಾಲವಡಗಿ, ಸುಭಾಸ ಬಿದಿರಕುಂದಿ, ಸತೀಶ ಹಿರೇಮಠ, ಬಿ.ಆರ್.ಬೆಳ್ಳಿಕಟ್ಟಿ, ಮಂಜುನಾಥ ಪಡದಾಳಿ, ರಂಜಿತಾ ಭಟ್ಟ, ತ್ರಿವೇಣಿ ಕುಲಕರ್ಣಿ, ರಾಧಾ ಕೋಲಕಾರ, ಗುರುಪಾದಪ್ಪ ಬೋಗಿ, ಬಸವರಾಜ ನಾಲತವಾಡ, ಶಂಕರ ಬೇವಿನಗಿಡದ, ರೇಣುಕಾ ಮಡಿವಾಳರ್, ಪ್ರೇಮಾ ನಾಯಕ ಸೇರಿದಂತೆ ಜಿಲ್ಲಾ ಮಟ್ಟದ ೨೭ ಶಾಲೆಗಳ ಸರ್ವ ಸಿಬ್ಬಂದಿವರ್ಗದವರು ಹಾಜರಿದ್ದರು,

