ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಕೃಷಿ ಮಾರುಕಟ್ಟೆಯಿಂದ ನಮ್ಮ ರೈತರಿಗೆ, ಕಾರ್ಯಕರ್ತರಿಗೆ ದೊರೆಯುವ ಪ್ರತಿಯೊಂದು ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಕಾರ್ಯ ಮಾಡುತ್ತೆನೆಂದು ಎಪಿಎಂಸಿ ನಾಮನಿರ್ದೆಶಿತ ಸದಸ್ಯ ಉಮೇಶ ಪೂಜಾರಿ ಹೇಳಿದರು.
ಗ್ರಾಮದ ಕಾಂಗ್ರೆಸ್ ಕಛೇರಿ, ಹಾಗೂ ಮನೆಯ ಆವರಣದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಪಕ್ಷ ನನಗೆ ನೀಡಿರುವ ಈ ಅವಕಾಶವನ್ನು ಬಳಸಿಕೊಂಡು ಉತ್ತಮ ಸೇವೆ ಸಲ್ಲಿಸುವ ಮೂಲಕ ಪಕ್ಷಕ್ಕೆ ಕೊಡುಗೆ ನೀಡುತ್ತೇನೆ, ಪ್ರತಿಯೊಬ್ಬ ಕಾರ್ಯಕರ್ತರು ತಮ್ಮಲ್ಲಿರುವ ಸಣ್ಣಪುಟ್ಟ ಭಿನ್ನಾಬಿಪ್ರಾಯಗಳನ್ನು ಬದಿಗೊತ್ತಿ ಪಕ್ಷ ಸಂಘಟನೆಗೆ ಪ್ರತಿಯೊಬ್ಬರು ಕೈಜೋಡಿಸಬೇಕು.
ಗ್ರಾ.ಪಂ. ಸದಸ್ಯ ಮಹಾಲಿಂಗ ಮಾಯನ್ನವರ ಮಾತನಾಡಿ ಚಿಮ್ಮಡ ಗ್ರಾಮಸ್ಥರಿಗೆ ಸರಕಾರ ಎಪಿಎಂಸಿ ನಾಮನಿರ್ದೆಶಕ ಸ್ಥಾನವನ್ನು ನೀಡುವ ಮೂಲಕ ಉತ್ತಮ ಅವಕಾಶವನ್ನು ನೀಡಿದ್ದುಉ ಅದನ್ನು ಸದುಪಯೋಗ ಪಡೆದುಕೊಳ್ಳುತ್ತೇವೆ. ಅವಕಾಶ ನೀಡಿದ ಎಲ್ಲರನ್ನು ಗ್ರಾಮಸ್ಥರ ಪರವಾಗಿ ಅಭಿನಂದಿಸುತ್ತೇವೆಂದರು. ಪ್ರಮುಖರಾದ ಅಶೋಕ ಮೋಟಗಿ, ಗ್ರಾ. ಪಂ ಸದಸ್ಯ ಚನ್ನಪ್ಪ ಪೂಜಾರಿ, ಅರುಣ ಗಾಣಿಗೇರ, ಶ್ರೀಶೈಲ ಮಠಪತಿ, ಮಹಾಲಿಂಗ ಬಳಗಾರ, ಪಿರಸಾಬ ನದಾಫ, ಅಶೋಕ ಚಿಮ್ಮಡ, ಮಹಾದೇವ ಕೋಳಿ, ಇಮಾಮ ಯಾದವಾಡ, ಸಲೀಮ ಸರಕಾವಸ ಸೇರಿದಂತೆ ಹಲವಾರು ಜನ ಪ್ರಮುಖರು ಈ ಸಂಧರ್ಬದಲ್ಲಿ ಉಪಸ್ಥಿತರಿದ್ದರು.

