ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಾರ್ಮಿಕರ ರಾಜ್ಯ ವಿಮಾ ನಿಗಮವು ಕಾರ್ಮಿಕರ ಕಲ್ಯಾಣಕ್ಕಾಗಿ SPREE ೨೦೨೫- ಉದ್ಯೋಗದಾತರು ಮತ್ತು ಉದ್ಯೋಗಿಗಳ ನೋಂದಣೀಯನ್ನು ಉತ್ತೇಜಿಸುವ ಯೋಜನೆ-೨೦೨೫ ಎಂಬ ನವೀಕೃತ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಡಿಸೆಂಬರ್ ೩೧ರವರೆಗೆ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಕಾರ್ಮಿಕರ ರಾಜ್ಯ ವಿಮಾ ನಿಗಮದ ಜಿಲ್ಲಾ ಶಾಖಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಗಡಿಗಳು, ಹೋಟೆಲ್ ಮತ್ತು ರೆಸ್ಟೋರೆಂಟ್ಗಳು, ಸಿನೆಮಾ ಹಾಲ್, ರಸ್ತೆ ಸಾರಿಗೆ ಘಟಕಗಳು, ವಾರ್ತಾಪತ್ರಿಕಾ ಘಟಕಗಳು, ಖಾಸಗಿ ವೈದ್ಯಕೀಯ ಸಂಸ್ಥೆಗಳು. ವಿದ್ಯಾ ಸಂಸ್ಥೆಗಳು ಮತ್ತು ಮುನ್ಸಿಪಲ್ ಕಾರ್ಪೊರೇಷನ್ ಗಳಲ್ಲಿ ಕಾರ್ಯನಿರ್ವಹಿಸುವ ಗುತ್ತಿಗೆ ಕಾರ್ಮಿಕರು ಹಾಗೂ ತಾತ್ಕಾಲಿಕ, ಸಾಂಧರ್ಭಿಕ ಗುತ್ತಿಗೆ ಕಾರ್ಮಿಕರನ್ನು ಒಳಗೊಂಡAತೆ ಕಾರ್ಯನಿರತ ಅರ್ಹ ಉದ್ಯೋಗಸ್ಥರು ನೋಂದಾಯಿಸಿಕೊಳ್ಳಲು ಅವಕಾಶವಿರುತ್ತದೆ.
ಒಂದು ಬಾರಿ ನೋಂದಾಯಿಸಿಕೊAಡರೆ, ನೋಂದಣಿಯಾದ ದಿನಾಂಕದಿAದ ಉದ್ಯೋಗಿಗಳು ಹಾಗೂ ಅವರ ಕುಟುಂಬದ ಸದಸ್ಯರುಗಳಿಗೆ ವೈದ್ಯಕೀಯ ಸೌಲಭ್ಯಗಳಾದ ಅನಾರೋಗ್ಯ, ಪ್ರಸವ (ಹೆರಿಗೆ), ಅಪಘಾತ ಹಾಗೂ ಉದ್ಯೋಗದ ಸಂದರ್ಭದಲ್ಲಿ ಉದ್ಯೋಗಿಗಳು ಮರಣ ಹೊಂದಿದ್ದರೆ, ನಗದು ಸೌಲಭ್ಯ ಸೇರಿದ್ದಂತೆ ಇಎಸ್‌ಐ ಕಾಯ್ದೆ ೧೯೪೮ ರ ಅಡಿಯಲ್ಲಿ ಧೀರ್ಘಾವಧಿ ಭದ್ರತೆಯ ರಕ್ಷಣೆಯು ಕಾರ್ಮಿಕರಿಗೆ ದೊರೆಯುತ್ತದೆ.
SPಖಇಇ ೨೦೨೫ ಅಡಿಯಲ್ಲಿ ನೋಂದಣಿಯನ್ನು ಉದ್ಯೋಗದಾತರುESIC : https://www.esic.gov.in ಪೋರ್ಟಲ್ ಹಾಗೂ ಶ್ರಮ್ ಸುವಿಧಾhttps://registration.shramsuvidha.gov.in/user/register ಪೋರ್ಟಲ್‌ನಲ್ಲೂ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಈ ಕುರಿತು ಸಹಾಯಕ್ಕಾಗಿhttps://portal.esic.gov.in/ ಹಾಗೂ https://www.esic.gov.in/ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
