ಉದಯರಶ್ಮಿ ದಿನಪತ್ರಿಕೆ
ಚಡಚಣ: ಬಳ್ಳೋಳ್ಳಿ ಗ್ರಾಮದಲ್ಲಿ ಸುಖ, ಸಮೃದ್ಧಿ ನೆಲಸಲಿ ಮತ್ತು ವರುಣನ ಕೃಪಾಕಟಾಕ್ಷದ ಸಲುವಾಗಿ ಥಂಡಿ ಕಾರ್ಯಕ್ರಮ ನಮ್ಮ ಹಿರಿಯರ ವಾಡಿಕೆಯಂತೆ ಸುಮಾರು ವರ್ಷಗಳಿಂದ ಆಚರಣೆ ಮಾಡುತ್ತಾ ಬಂದಿದ್ದೇವೆ ಎಂದು ಜೈ ಭವಾನಿ ಗೋಂದಳಿ ಸೇವಾ ಸಮೀತಿಯ ಗೌರವ ಅಧ್ಯಕ್ಷ ರಾಜು ಬಿಸೆ ಹೇಳಿದರು.
ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಜೈ ಭವಾನಿ ಗೋಂದಳಿ ಸೇವಾ ಸಮೀತಿ ಬಳ್ಳೊಳ್ಳಿ ಇವರಿಂದ ಮರಗಮ್ಮ ದೇವಿಯ ಮತ್ತು ದುರ್ಗಾ ದೇವಿಯ ಥಂಡಿ ಕಾರ್ಯಕ್ರಮ ಅತಿ ವಿರ್ಜಂಭಣೆಯಿಂದ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ದೇವೆಂದ್ರ ಬಿಸೆ, ಗೌತಮ ಬಿಸೆ,ಅನೀಲ ಕಾಳೆ ತಮ್ಮ ಅನಿಸಿಕೆಗಳನ್ನು ತಿಳಿಸಿದರು.
ಪ್ರತಾಪ ಬಿಸೆ, ಮನೊಹರ ಬಿಸೆ, ಶ್ರೀಶೈಲ ಶಿಂಧೆ, ವಸಂತ ಶಿಂಧೆ, ಭಾಜಿರಾಬ ಶಿಂಧೆ, ಬಸವರಾಜ ಬಿಸೆ, ಲಕ್ಷಣ ಪಾಚಂಗೆ, ಆಕಾಶ ಸಾಳುಂಕೆ, ಅಜಿತ ಸಾಳುಂಕೆ, ದೀಪಕ ಬಿಸೆ ಹಾಗೂ ಗೋಂದಳಿ ಸಮಾಜದ ಎಲ್ಲ ಸದಸ್ಯರು ಗ್ರಾಮಸ್ಥರು ಇದ್ದರು.

