ದೇವರಹಿಪ್ಪರಗಿ: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ರೋಗಿಗಳಿಗೆ ಪಿಂಜಾರ್, ನದಾಫ ಸಮುದಾಯದ ಪ್ರಮುಖರು ಈದ್‌ಮಿಲಾದ್ ಹಬ್ಬದ ಪ್ರಯುಕ್ತ ಗುರುವಾರ ಹಣ್ಣು ಹಂಪಲು ವಿತರಿಸಿದರು.
ಈ ಸಂದರ್ಭದಲ್ಲಿ ಪಿಂಜಾರ್,ನದಾಫ ಸಮಾಜ ಜಿಲ್ಲಾಧ್ಯಕ್ಷ ಹುಸೇನ್ ಗೌಂಡಿ ಮಾತನಾಡಿ, ಮಹಮ್ಮದ ಪೈಗಂಬರರ ಜೀವನದ ಮೌಲ್ಯಗಳು ನಮಗೆಲ್ಲ ಮಾದರಿಯಾಗಿವೆ. ಎಲ್ಲರೂ ಅವರ ತತ್ವಾದರ್ಶಗಳನ್ನು ಪಾಲಿಸಬೇಕೆಂದು ಮನವಿ ಮಾಡಿದರು.
ಪಿಂಜಾರ್‌ನದಾಫ್ ತಾಲ್ಲೂಕು ಅಧ್ಯಕ್ಷ ಲಾಡ್ಲೆಮಶಾಕ್ ರೂಗಿ, ಸಲೀಂ ನದಾಫ, ಹಸನಸಾಬ ನದಾಫ, ರೆಹಮಾನ್ ನದಾಫ, ಸುನೀಲ ಕನಮಡಿ, ಹಾಗೂ, ವೈದ್ಯಾಧಿಕಾರಿ ಡಾ,ಯೋಗೇಶ, ಶಮಶಾದ್ ಫರುಕಾಬಾದ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಹಾಗೂ ರೋಗಿಗಳು ಇದ್ದರು.
Related Posts
Add A Comment