ದೇವರಹಿಪ್ಪರಗಿ: ಪ್ರತಿಭೆ ಪರಿಶ್ರಮದಿಂದ ಬರುವಂತಾಗಿದ್ದು, ವಿದ್ಯಾರ್ಥಿಗಳು ಸಾಧಿಸಬೇಕೆಂಬ ಸಂಕಲ್ಪಕ್ಕೆ ಬದ್ಧರಾಗಬೇಕು ಎಂದು ಕೊಂಡಗೂಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಾವಲಬಿ ಸೋಲಾಪುರ ಹೇಳಿದರು.
ತಾಲ್ಲೂಕಿನ ಕೊಂಡಗೂಳಿ ಗ್ರಾಮದ ಎಮ್‌ಪಿಎಸ್ ಶಾಲೆಯಲ್ಲಿ ಗುರುವಾರ ಜರುಗಿದ ಕೊಂಡಗೂಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿಭೆಗೆ ಯಾರೂ ಹಣ ಕೊಡಬೇಕಿಲ್ಲ. ಅದು ತನ್ನಿಂದ ತಾನೇ ಉದಯಿಸುವ ಪ್ರಕ್ರಿಯೆ, ಪ್ರತಿಭೆಯನ್ನು ಗುರ್ತಿಸಿ ಬೆಳೆಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದರು.
ವೀರಘಂಟಯ್ಯ ಗದ್ದಿಗೆಮಠ ಸಾನಿಧ್ಯ ವಹಿಸಿದ್ದರು. ಶಿಕ್ಷಣ ಸಂಯೋಜಕ ಐ.ಎಫ್.ಭಾಲ್ಕಿ, ಬಿಆರ್‌ಪಿ ಗಳಾದ ಜಗದೀಶ ಅಲ್ದಿಮಠ ಹಾಗೂ ಶ್ರೀದೇವಿ ರೆಬಿನಾಳ ಸಸಿಗೆ ನೀರು ಹನಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸ್ಥಳೀಯ ಸಿಆರ್‌ಪಿ ಎಮ್.ಎನ್.ಒಡೆಯರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಶಿವಲೀಲಾ ಕುರುಮಲ್ಲಪ್ಪಗೋಳ, ಅಪ್ಪಾಸಾಹೇಬ ಬಸರಕೋಡ, ಈರಣ್ಣ ತಾವರಖೇಡ, ಸಿದ್ದಣ್ಣ ಸಿಂದಗೇರಿ, ಮಹಾಂತೇಶ ಗುಬ್ಬೇವಾಡ, ಪ್ರಾಥಮಿಕ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಎ.ಎಚ್. ವಾಲೀಕಾರ, ಬಿ.ಬಿ.ಅಗ್ನಿ, ಶಿಕ್ಷಕರ ಸಂಘದ ಖಜಾಂಚಿ ಪರಶುರಾಮ ತಳಕೇರಿ, ಜಿ.ಬಿ.ಹೊಕ್ಕುಂಡಿ, ಷಣ್ಮಖಪ್ಪ ಅಂಬಲಿ, ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು, ಎಸ್‌ಡಿಎಮ್‌ಸಿ ಪದಾಧಿಕಾರಿಗಳು, ಕೊಂಡಗೂಳಿ ಕ್ಲಸ್ಟರ್ ವ್ಯಾಪ್ತಿಯ ಮುಖ್ಯಗುರುಗಳು, ಸಹಶಿಕ್ಷಕರು, ಮಕ್ಕಳು ಹಾಗೂ ಗ್ರಾಮಸ್ಥರು ಇದ್ದರು.
Related Posts
Add A Comment