ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಗರದ ಖಾಸಗಿ ಹೋಟೆಲೊಂದರಲ್ಲಿ ಜಾಂಭವ ಯುವ ಸೇನೆಯ ಸಿಂದಗಿ ತಾಲೂಕು ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಿ ರಾಜ್ಯಾಧ್ಯಕ್ಷ ಡಾ.ರಮೇಶ ಚಕ್ರವರ್ತಿ ಅವರ ಆದೇಶದ ಮೇರೆಗೆ ಆದೇಶ ಪತ್ರ ನೀಡಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಆದಿಜಾಂಭವ ಜನಸಂಘದ ಉಕ ವಲಯ ಅಧ್ಯಕ್ಷ ಸಾಯಬಣ್ಣ ದೇವರಮನಿ, ಕೆಂಚಪ್ಪ ಪುರದಾಳ, ಆಕಾಶ ಇಂಗಳಗಿ, ಕನಕಮೂರ್ತಿ ವಗ್ಗರ, ಕಲ್ಯಾಣಿ ಪುರದಾಳ, ಮಂಜುನಾಥ ಕಟ್ಟಿಮನಿ ಹಣಮಂತ ಹೊಸಮನಿ, ರಾಹುಲ ದೊಡಮನಿ, ಮಂಜುನಾಥ ಯಾದವ, ನಾಗೇಶ ವಗ್ಗರ, ಸೋಮು ಕಡಿಮನಿ, ಸಂಜು ಕಟ್ಟಿಮನಿ, ಪ್ರಜ್ವಲ ದೇವರಮನಿ, ರಾಘು ಮೇಲಿನಮನಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಇದ್ದರು.

