ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಚಾರಿತ್ರ್ಯ ಚಕ್ರವರ್ತಿ ಶ್ರೀಶಾಂತಿಸಾಗರ ಮುನಿ ಮಹಾರಾಜರ 70ನೇ ಪುಣ್ಯತಿಥಿ ಆಚರಣೆಗೆ ಅವಕಾಶ ಲಭಿಸಿದ್ದು, ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಜನತೆ ಪುಣ್ಯವಂತರು ಎಂದು ಮಹಾರಾಷ್ಟ್ರದ ಜೈನ ಸಮುದಾಯದ ಮುಖ್ಯಸ್ಥ ಬಾಳಾಸಾಬ ಪಾಟೀಲ ಹೇಳಿದರು.
ನಗರದ ಪ್ರಭಾತನಗರ ಬಡಾವಣೆಯಲ್ಲಿರುವ ಶ್ರೀ ಪಾಶ್ವನಾರ್ಥ ದಿಗಂಬರ ಜೈನ ಮಂದಿರದಲ್ಲಿ ಚಾರಿತ್ರ್ಯ ಚಕ್ರವರ್ತಿ 108 ಶ್ರೀಶಾಂತಿಸಾಗರಮುನಿ ಮಹಾರಾಜರ 70ನೇ ಪುಣ್ಯತಿಥಿ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಚಾರಿತ್ರ್ಯಚಕ್ರವರ್ತಿ ಶಾಂತಿಸಾಗರ ಮುನಿ ಮಹಾರಾಜರ 70ನೇ ಪುಣ್ಯತಿಥಿ ಸಮಾರಂಭವನ್ನು ಅರ್ಥಪೂರ್ಣವಾಗಿ ಆಚರಿಸೋಣ. ಬೃಹತ್ ಸಮಾರಂಭ ಯಶಸ್ವಿಗಾಗಿ ಆಯೋಜನೆಗೆ ಪ್ರತಿಯೊಬ್ಬರೂ ತನು-ಮನ-ಧನ ಸಹಾಯ ಮಾಡಬೇಕು. ಸಮಿತಿಯವರು ವಹಿಸುವ ಜವಾಬ್ದಾರಿಗಳನ್ನು ಸಮಾಜ ಬಂಧುಗಳು ಅಚ್ಚುಕಟ್ಟಾಗಿˌ ಮಾಡಬೇಕು. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ. ಅಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಪುಣ್ಯತಿಥಿ ಆಚರಣೆ ದಿನಾಂಕ ನಿಗದಿಗೊಳ್ಳಲಿದೆ ಎಂದು ಹೇಳಿದರು.
ಅಧ್ಯಕ್ಷ ಬಾಳಾಸಾಬ ಪಾಟೀಲ, ಉಪಾಧ್ಯಕ್ಷ ಸುಭಾಷ ಮಗದುಮ್, ಕಾರ್ಯದರ್ಶಿ ಅಜೀತ ಬಂಡೆ, ಖಜಾಂಚಿ ರಾವಸಾಹೇಬ ಕೊಣ್ಣೂರ, ಅಭಯಕುಮಾರ ಬಾಗಾದೆ, ಆನಂದ ಉಗಾರೆ, ಜಿನಗೊಂಡ ಪಾಟೀಲ, ರಾವಸಾಬ ಪಾಟೀಲ, ಬಾಹುಬಲಿ ಶಿರಗಾರ, ನೇಮಣ್ಣ ಜಮಖಂಡಿ, ದಯಾನಂದ ಶಿರಗಾರ, ಬಿ.ಪಿ. ನ್ಯಾಮಗೌಡ, ರಾಜಕುಮಾರ ಡೋರ್ಲೆ, ಜೆ.ಜೆ. ಪಾಟೀಲ, ವೈಭವ ಚೌಗಲೆ, ಅಜೀತ ಮಡಕೆ, ಪಂಕಜ ಪಾಟೀಲ, ನೀತಿಶ ದೇಸಾಯಿ, ಪ್ರವೀಣ ನಾಡಗೌಡ, ಸಾಗರ ಆಲಗೂರ, ಅಣ್ಣಪ್ಪ ನಂದಗಾಂವ, ಅಭಯಕುಮಾರ ನಾಂದ್ರೆಕರ, ಮಹಾವೀರ ಗಣಿ, ರಾ.ಪಿ.ನ್ಯಾಮಗೌಡ, ಎ.ಎನ್.ರಾಮಗೊಂಡ ಸಹಿತ ಸಮಾಜದ ಹಿರಿಯರು ಇದ್ದರು.
