ದೇವರಹಿಪ್ಪರಗಿ: ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಪರಿಣಾಮಕಾರಿ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಸಾರ್ವಜನಿಕರು ಸಹ ಸಹಕಾರ ನೀಡಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಇಂಡಿ ರಸ್ತೆಯಲ್ಲಿ ಬೆಳೆದ ಅನಗತ್ಯ ಕಳೆ ತೆಗೆಯುವ ಕಾರ್ಯಕೈಗೊಂಡು ಮಾತನಾಡಿದರು.
ಪಟ್ಟಣದ ಸ್ವಚ್ಛತೆಗಾಗಿ ಪ್ರತಿವಾರ ಒಂದೊಂದು ಸ್ಥಳವನ್ನು ಆಯ್ಕೆಮಾಡಿಕೊಂಡು ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತಿದೆ. ಪೌರಕಾರ್ಮಿಕರು ಸಹ ತಮ್ಮ ಕರ್ತವ್ಯದ ಬಹುತೇಕ ಅವಧಿಯನ್ನು ಸ್ವಚ್ಛತೆಯಲ್ಲಿಯೇ ಕಳೆಯುತ್ತಿದ್ದಾರೆ. ಅದಾಗ್ಯೂ ಕೆಲವು ಪ್ರದೇಶಗಳು ಮಲೀನವಾಗಿ ಕಾಣುತ್ತಿವೆ.
ಪಟ್ಟಣದ ಸೌಂದರ್ಯ ಹೆಚ್ಚಲು ಸ್ವಚ್ಛತೆ ಅಗತ್ಯವಾಗಿದೆ. ಅದಕ್ಕಾಗಿ ಸಾರ್ವಜನಿಕರು ಸಹ ಸಿಬ್ಬಂದಿಗೆ ಸಹಕಾರ ನೀಡಬೇಕು. ತಮ್ಮ ಮನೆಗಳ ಸುತ್ತಲೂ ನೈರ್ಮಲ್ಯ ಕಾಪಾಡಬೇಕು. ಆರೋಗ್ಯಯುತ ಜೀವನ ನಮ್ಮ ಆದ್ಯತೆಯಾಗಲಿ. ಅದಕ್ಕಾಗಿ ಪ್ರತಿ ಕುಟುಂಬ ಪಂಚಾಯಿತಿ ನೀಡಿದ ಡಬ್ಬಿಗಳಲ್ಲಿ ಒಣ ಹಾಗೂ ಹಸಿ ತ್ಯಾಜ್ಯವನ್ನು ವಿಂಗಡಿಸಿ ವಿಲೇವಾರಿ ಮಾಡುವ ಸಿಬ್ಬಂದಿಗೆ ಸಹಕರಿಸಬೇಕು ಎಂದರು.
ಕಿರಿಯ ಆರೋಗ್ಯ ನಿರೀಕ್ಷಕ ಫಿರೋಜ್ ಮುಲ್ಲಾ, ನೈರ್ಮಲ್ಯ ಮೇಲ್ವಿಚಾರಕ ಮಾರ್ತಾಂಡ ಗುಡಿಮನಿ, ಇಮಾಮ್ ಮುಲ್ಲಾ, ಮುಬಾರಕ್ ಪಡೇಕನೂರ, ಅಶೋಕ ಮಲ್ಲಾರಿ, ಶೇಖರ್ ಮರಬಿ, ರಫೀಕ್ ನದಾಫ್, ರಾಜು ಕರ್ಜಗಿ ಇದ್ದರು.
Related Posts
Add A Comment