ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ವಿದ್ಯಾರ್ಥಿಗಳು ಗುಣಾತ್ಮಕ ಶಿಕ್ಷಣ ಪಡೆಯಲು ಯಾವುದೇ ಕೊರತೆಯಾಗಬಾರದು ಎಂಬ ಉದ್ದೇಶದಿಂದ ಪ್ರತಿ ವಿದ್ಯಾರ್ಥಿಗಳಿಗೂ ಅಗತ್ಯ ನೋಟ್ ಬುಕ್, ಪೆನ್ ಗಳನ್ನು ವಿತರಿಸಲಾಗುತ್ತಿದೆ ಎಂದು ಚಂದ್ರಗಿರಿ ಚಂದ್ರಮ್ಮ ದೇವಸ್ಥಾನದ ಧರ್ಮಾಧಿಕಾರಿ ಚಂದ್ರಕಾಂತ ಸಿರಿಯಪ್ಪ ದೇಸಾಯಿ ಹೇಳಿದರು.
ಅವರು ತಮ್ಮ ಸ್ವಂತ ಖರ್ಚಿನಲ್ಲಿ ಇಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲೆಯ ೬೫ ವಿದ್ಯಾರ್ಥಿಗಳಿಗೆ ತಲಾ ಎರಡು ನೋಟ್ ಬುಕ್ ೨ ಪೆನ್ ಹಾಗೂ ಮಂಜಪ್ಪ ಹರ್ಡೇಕರ ಪ್ರೌಢಶಾಲೆಯ ೩೦೦ ವಿದ್ಯಾರ್ಥಿಗಳಿಗೆ ತಲಾ ಐದು ನೋಟ್ ಬುಕ್ ಹಾಗೂ ಎರಡು ಪೆನ್ ಗಳನ್ನು ಗುರುವಾರ ವಿತರಿಸಿ ಮಾತನಾಡಿದ ಅವರು, ಈ ಶಾಲೆಯಲ್ಲಿ ಕಲಿತಕ್ಕಂತ ಮಕ್ಕಳಿಗೆ ಅಜೀವ ಪರ್ಯಂತ ಪ್ರತಿವರ್ಷ ಸಹ ಪೆನ್ನು ಪುಸ್ತಕವನ್ನು ನೀಡುವೆ. ಸ್ವ ಸಂತೋಷದಿಂದ ಆತ್ಮ ತೃಪ್ತಿಗಾಗಿ ಈ ಸಮಾಜ ಋಣವನ್ನು ತೀರಿಸಲು ಪ್ರಯತ್ನಿಸುತ್ತಿರುವೆ. ಕಳೆದ ಮೂರು ವರ್ಷಗಳಿಂದ ಈ ನೋಟ್ ಬುಕ್ ವಿತರಿಸುತ್ತಿದ್ದು, ಆರ್ಥಿಕವಾಗಿ ಹಿಂದುಳಿದ ನೈಜ ಪ್ರತಿಭಾವಂತ ಮಗುವಿನ ಶಿಕ್ಷಣಕ್ಕೂ ಆರ್ಥಿಕ ಸಹಾಯ ಮಾಡುವುದಾಗಿಯೂ ಅವರು ತಿಳಿಸಿದರು.
ಹಿರಿಯ ಶಿಕ್ಷಕ ಉದಯಕುಮಾರ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.
ಶಿವಕುಮಾರ ಕೆ.ವಿ, ಮಹಾದೇವ ಗೋಂಧಳಿ, ಜಿ.ಎಂ.ಹಿರೇಮಠ, ಎಂ.ಎಚ್.ಬಳಬಟ್ಟಿ, ಶ್ರೀಮತಿ, ಜಗದೇವಿ.ಕೆ. ಮಹೇಶ ಗಾಳಪ್ಪಗೋಳ, ಸರಸ್ವತಿ ಈರಗಾರ, ಜ್ಯೋತಿ ವೀರುಪಾಕ್ಷಪ್ಪ ಹಡಪದ, ಪರಶುರಾಮ ಹರಣಶಿಕಾರಿ, ಸಾಗರ ಮತ್ತಿತರರು ಇದ್ದರು.

