ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಕಲಿಕೆಯ ಹಂಬಲ ಹೊಂದಿರುವ ಬಡ ವಿದ್ಯಾರ್ಥಿಗಳಾದ ತಾಲೂಕಿನ ಸವಳಹಳ್ಳ ತಾಂಡಾದ ಅಂಕಿತಾ ರಾಠೋಡ, ಸಾಹೀಲ ಚವ್ಹಾಣ, ಚೇತನಕುಮಾರ ರಜಪೂತ ಅವರ ಪದವಿ ವ್ಯಾಸಂಗ ಶುಲ್ಕವನ್ನು ತುಂಬುವ ಮೂಲಕ ಸ್ಥಳೀಯ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿ ಸಂಘದ ಸದಸ್ಯರಾದ ವಿನುತ ಕಲ್ಲೂರ (ವಿವೇಕ ಬ್ರಿಗೇಡ್) ಸಚೀನ ಕಲ್ಲೂರ ಅವರು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ. ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಅವರಿಗೆ ಗುರುವಾರ ಮೂವರು ವಿದ್ಯಾಥಿಗಳ ಪದವಿ ಶುಲ್ಕವನ್ನು ನೀಡಿದರು. ಮೂವರು ವಿದ್ಯಾರ್ಥಿಗಳ ಪದವಿ ಶುಲ್ಕವನ್ನು ಸ್ವೀಕರಿಸಿದ ಪ್ರಾಚಾರ್ಯರು ಬಡ ವಿದ್ಯಾರ್ಥಿಗಳ ಕಲಿಕೆಗೆ ಧನಸಹಾಯ ಮಾಡಿದ ಮಹನೀಯರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಧನ ಸಹಾಯ ಪಡೆದ ವಿದ್ಯಾರ್ಥಿಗಳು ನಾವು ನಿರಂತರ ಅಧ್ಯಯನ ಮಾಡುವ ಮೂಲಕ ಮಹಾವಿದ್ಯಾಲಯಕ್ಕೆ, ಧನಸಹಾಯ ಮಾಡಿದ ಮಹನೀಯರಿಗೆ ಚ್ಯುತಿ ಬಾರದಂತೆ ಉತ್ತಮ ಸಾಧನೆ ಮಾಡುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿ ಸಂಘದ ಸದಸ್ಯರಾದ ಪೃಥ್ವಿರಾಜ ನಾಯ್ಕೋಡಿ, ಶಿವಾನಂದ ತೋಳನೂರ, ಮಹಾವಿದ್ಯಾಲಯ ಸಿಬ್ಬಂದಿಗಳಾದ ಡಾ.ಶೋಭಾ ಜನಗೊಂಡ, ವ್ಹಿ.ಎನ್.ರಜಪೂತ ಇದ್ದರು.

