ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದರಬಾರ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾವರ್ಧಕ ಸಂಘದ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕ್ರೀಡಾ ಸಾಮಗ್ರಿಗಳನ್ನು ವಕೀಲ ಪ್ರಕಾಶ ಉಡುಪಿಕರ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಮಕ್ಕಳಿಗೆ ನಿತ್ಯ ದೈಹಿಕ ಚಟುವಟಿಕೆ ಮಾಡಿಸುವುದರಿಂದ ದೈಹಿಕ ಮತ್ತು ಮಾನಸಿಕ ವಿಕಸನಕ್ಕೆ ಸಹಕಾರಿಯಾಗಿದೆ ಎಂದ ಅವರು, ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಯೋಗಾಸನ ಪ್ರಾಣಾಯಾಮ ಕಬಡ್ಡಿ ಮತ್ತು ಗುಂಪು ಚಟುವಟಿಕೆಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಪಾಲ್ಗೊಳ್ಳುವಂತೆ ದೈಹಿಕ ಶಿಕ್ಷಕರು ಪ್ರೇರಣೆ ನೀಡುವುದು ಅವಶ್ಯವಾಗಿದೆ ಹಾಗಾದಾಗ ಮಾತ್ರ ಭವಿಷ್ಯದಲ್ಲಿ ರಾಜ್ಯ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ನುಡಿದರು.
ಇದೆ ಸಂದರ್ಭದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಕೆ ಜಿ ದೇಶಪಾಂಡೆ, ಸದಸ್ಯರಾದ ವಿಶಾಲ ದರಬಾರ, ಆದಿತ್ಯ ದರಬಾರ, ಸಮನ್ವಯ ಅಧಿಕಾರಿ ಡಾ. ವಿ ಬಿ ಗ್ರಾಮ ಪುರೋಹಿತ, ಪಾರಥ ದರಬಾರ, ಪ್ರಧಾನ ಗುರುಮಾತೆ ರೂಪಾ ತೋಳ, ಮುಖ್ಯೋಪಾಧ್ಯಾಯ ರಮೇಶ ಕೋಟ್ಯಾಳ, ಜಿ.ಎಚ್.ಮಣೂರ, ಟಿ.ಆರ್.ಕುಲಕರ್ಣಿ, ಸತೀಶ ಕುಲಕರ್ಣಿ ಉಪಸ್ಥಿತರಿದ್ದರು.
ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

