ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಎಲ್ಲ ವೃತ್ತಿಗಳಲ್ಲಿ ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದದ್ದು ಎಂದು ಲಚ್ಯಾಣ ಡಿ.ಎಡ್,ಕಾಲೇಜು ಪ್ರಾಚಾರ್ಯ ಎಸ್.ಎಮ್.ಶೆಟ್ಟಣ್ಣವರ ಹೇಳಿದರು.
ಪಟ್ಟಣದ ಪಂಚಾಚಾರ್ಯ ಕಲ್ಯಾಣಮಂಟಪದಲ್ಲಿ ಸೋಮವಾರ ಜರುಗಿದ ೧೯೯೪-೯೫ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ನಾವು ಕಲಿಸಿದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗಳಲ್ಲಿ ಅಲಂಕರಿಸುವುದು ಶಿಕ್ಷಕನಿಗೆ ಸಿಗುವ ಅತೀ ದೊಡ್ಡ ಗೌರವವಾಗಿದೆ. ಶಿಕ್ಷಕನ ನಿಜವಾದ ಸಂಪತ್ತು ಅವರ ವಿದ್ಯಾರ್ಥಿಗಳು. ವಿದ್ಯಾರ್ಥಿಗಳು ಸಮಾಜದಲ್ಲಿ ಗೌರವ, ಉನ್ನತ ಸ್ಥಾನ ಪಡೆದಾಗ ಶಿಕ್ಷಕರಿಗೆ ಆಗುವ ಸಂತೊಷಕ್ಕೆ ಯಾವುದೇ ಸಾಟಿ ಇಲ್ಲ ಎಂದರು.
ನಿವೃತ್ತ ಪ್ರಾಚಾರ್ಯ ಎಸ್.ಎಮ್.ಮಿರ್ಜಿ ಹಾಗೂ ಬಿ.ಕೆ.ಪಾಟೀಲ ಮಾತನಾಡಿ, ಸುಮಾರು ೩೦ ವರ್ಷಗಳ ನಂತರ ವಿದ್ಯೆ ಕಲಿಸಿದ ಗುರುವಿನ ಮಹತ್ವ ಅರಿತು ಅವರಿಗೆ ವಂದಿಸುವ ಕಾರ್ಯ ಶ್ಲಾಘನೀಯ. ಇಂದು ಏನಾದರು ಗಳಿಸಿದ್ದರೆ ಅದೆಲ್ಲವು ಸಮಾಜದಿಂದ ಹಾಗಾಗಿ ಸಮಾಜದಿಂದ ಪಡೆದದ್ದನ್ನು ಮತ್ತೆ ಸಮಾಜದ ಉತ್ತಮ ಕಾರ್ಯಕ್ಕೆ ನೀಡಬೇಕು ಎಂದರು.
ನಿವೃತ್ತಶಿಕ್ಷಕ ಬಿ.ಸಿ.ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಕರಾದ ಎಸ್.ಎಸ್.ಯರನಾಳ, ಬಿ.ಜಿ.ಅರಳಿಮಟ್ಟಿ, ಎಸ್.ಎಮ್.ಕೌಲಗಿ, ಎ.ಕೆ.ಭತಗುಣಕಿ, ಎಸ್.ವ್ಹಿ.ಹದನೂರ(ಕೋಟಿನ), ಎಮ್.ಕೆ.ನಾಯ್ಕೋಡಿ, ಜೆ.ಆರ್.ಬಿರಾದಾರ, ಎಸ್.ಎಮ್. ಬಟವಾಲ್ ವೇದಿಕೆಯಲ್ಲಿದ್ದರು.
ವಿದ್ಯಾರ್ಥಿಗಳಾದ ರಮೇಶ ಮಸಬಿನಾಳ, ರಾಜೀವ ಗುತ್ತೆದಾರ, ರಾಜಕುಮಾರ ಇಂಗಳೆ, ಜ್ಯೋತಿ ಕೋರಿ, ರೇಖಾ ಕಡ್ಲೆವಾಡ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ವಿಜಯ ಪರದೇಶಿಮಠ, ಸೋಮಶೇಖರ ಹಿರೇಮಠ, ಶಿವನಗೌಡ ಪಾಟೀಲ ದಾವೂದ್ ರಿಸಾಲ್ದಾರ, ಶಿವಾನಂದ ರುದ್ರಗೌಡರ, ಶಿವಾನಂದ ವಸ್ತ್ರದ, ಅಭಿಜಿತ ತಡಪಟ್ಟಿ ಲಕ್ಷ್ಮಿ ಸಣ್ಣಕ್ಕಿ, ಸರೋಜಿನಿ ಮಣೂರ, ಸರೋಜನಿ ಪಾಟೀಲ, ರೇಖಾ ಚಿಮ್ಮಲಗಿ ಸುನೀತಾ ದೇವೂರ, ಶ್ರೀದೇವಿ ಹಲಸಂಗಿ ಇದ್ದರು.

