ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದ ಹೊಸನಗರದ ದುರ್ಗಾಂಬಾ ದೇವಿಯ ಜಾತ್ರಾ ಮಹೋತ್ಸವ ಭಕ್ತಿ ಭಾವದೊಂದಿಗೆ ಅದ್ಧೂರಿಯಾಗಿ ಜರುಗಿತು.
ಪಟ್ಟಣದ ಹೊಸನಗರದಲ್ಲಿನ ದುಗಾಂಬಾದೇವಿಯ ಆಷಾಢ ಮಾಸದ ಮೊದಲ ಮಂಗಳವಾರ ಜರುಗುವ ಸಾಂಪ್ರದಾಯಿಕ ಜಾತ್ರಾ ಮಹೋತ್ಸವಕ್ಕೆ ಬೆಳಿಗ್ಗೆ ಚಾಲನೆ ನೀಡಲಾಯಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ದೇವಿಯ ಪ್ರತಿಮೆಗೆ ಶಾಸ್ತ್ರೋಕ್ತ ಪೂಜೆ ಪುನಸ್ಕಾರಗಳು ಆರಂಭಗೊಂಡವು. ನಂತರ ದೇವಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಡೊಳ್ಳು ಸಹಿತ ವಿವಿಧ ವಾದ್ಯವೃಂದದೊಂದಿಗೆ ಹೊರಟ ಮೆರವಣಿಗೆ ಹಾಗೂ ಉತ್ಸವಕ್ಕೆ ಕುದುರೆ ಕುಣಿತ ವಿಶೇಷ ಮೆರಗು ತಂದಿತು. ಮೆರವಣಿಗೆ ವಠಾರ, ಬೇವಿನಕಟ್ಟೆ, ಪತ್ತಾರಕಟ್ಟಿ, ಮೇನ್‌ಬಜಾರ್ ಮಾರ್ಗವಾಗಿ ಪ್ರಮುಖ ಬೀದಿಗಳ ಮೂಲಕ ತೆರಳಿ ಸಾಯಂಕಾಲ ಹೊಸನಗರದ ಮೂಲದೇವಸ್ಥಾನ ತಲುಪಿತು.
ಮಹೋತ್ಸವದಲ್ಲಿ ತುಕಾರಾಮ ಸುಗತೇಕರ, ಅಪ್ಪು ಗೋಂಧಳಿ, ರಾಮ ವಾಗ್ಮೋಡೆ, ಸಿದ್ದಣ್ಣ ವಾಗ್ಮೋಡೆ, ಸುರೇಶ ಭೀಸೆ, ವಿಠ್ಠಲ ಶಿಂಧೆ, ಲಕ್ಷ್ಮಣ ಸುಗತೇಕರ, ಯಲ್ಲಪ್ಪ ಸುಗತೇಕರ ಸೇರಿದಂತೆ ಗೋಂಧಳಿ ಸಮುದಾಯದ ಪ್ರಮುಖರು, ಮಹಿಳೆಯರು ಹಾಗೂ ಮಕ್ಕಳು ಇದ್ದರು.

