೧೯೯೩-೯೪ನೇ ಸಾಲಿನ ವಿದ್ಯಾರ್ಥಿಗಳಿಂದ ಗುರು ವಂದನೆ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ಮನುಷ್ಯ ಜೀವನ ಬಹಳ ಶ್ರೇಷ್ಠವಾದುದ್ದು, ನಮ್ಮ ಬದುಕಿಗೆ ಶ್ರೇಷ್ಠತೆ ಸಿಗಬೇಕಾದರೆ ಹೆತ್ತವರು ಮತ್ತು ವಿದ್ಯೆ ಕಲಿಸಿದ ಗುರುಗಳಿಂದ. ಹೀಗಾಗಿ ಹೆತ್ತವರು ಮತ್ತು ಬದುಕಿಗೆ ಬೆಳಕಾದ ಗುರುಗಳ ಸ್ಮರಣೆ ಮಾಡುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಶಾಸಕ ಎಂ.ವೈ ಪಾಟೀಲ್ ಹೇಳಿದರು.
ಅಫಜಲಪುರ ಪಟ್ಟಣದ ಮಳೇಂದ್ರ ಕಲ್ಯಾಣ ಮಂಟಪದಲ್ಲಿ ಮಹಾಂತೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ೧೯೯೩-೯೪ನೇ ಸಾಲಿನ ವಿದ್ಯಾರ್ಥಿಗಳಿಂದ ನಡೆದ ಗುರುವಂದನೆ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮಿಲನ ಉದ್ಘಾಟಿಸಿ ಮಾತನಾಡಿದ ಅವರು, ಮಹಾಂತೇಶ್ವರ ಶಿಕ್ಷಣ ಸಂಸ್ಥೆ ಒಂದು ಸಂಸ್ಥಾನವಿದ್ದಂತೆ, ಅಲ್ಲಿ ಕಲಿತವರು ಇಂದು ರಾಜ್ಯದ ತುಂಬ ವಿವಿಧ ಹುದ್ದೆಗಳಲ್ಲಿದ್ದಾರೆ, ಉದ್ಯಮಿಗಳಾಗಿದ್ದಾರೆ, ಸಮಾಜಕ್ಕೆ ಮಾರ್ಗದರ್ಶಕರಾಗಿದ್ದಾರೆ, ರಾಜಕಾರಣಿಗಳಾಗಿದ್ದಾರೆ. ಅಂತಹ ವಿದ್ಯಾ ಸಂಸ್ಥೆಯಲ್ಲಿ ಕಲಿತವರು ತಮಗೆ ಕಲಿಸಿದ ಗುರುಗಳನ್ನು ಸ್ಮರಿಸಿ ಗುರುವಂದನೆ ಕಾರ್ಯಕ್ರಮ ಆಯೋಜಿಸಿದ್ದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಮಳೇಂದ್ರ ಮಠದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಸಾನಿಧ್ಯ ವಹಿಸಿ ಮಾತನಾಡಿ, ೩೩ ವರ್ಷಗಳ ಬಳಿಕ ಹಳೆಯ ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಸೇರಿದ್ದು ಒಂದು ವಿಶೇಷವಾದರೆ, ಕಲಿಸಿದ ಗುರುಗಳ ಸ್ಮರಣೆ ಮತ್ತು ಸತ್ಕಾರ ಮಾಡುತ್ತಿರುವುದು ಇನ್ನೊಂದು ವಿಶೇಷ. ಇಂತಹ ವಿಶೇಷ ಕಾರ್ಯಕ್ರಮದಲ್ಲಿ ಸಾಕ್ಷಿಯಾಗಿದ್ದು ನನಗೂ ಖುಷಿ ತಂದಿದೆ ಎಂದರು.
೧೯೯೩-೯೪ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಮದ ಗುರುಗಳಾದ ಬಿ.ಎಸ್ ಪಟೇಲ್, ಶ್ರೀಪಾದರಾವ್ ಕುಲಕರ್ಣಿ, ಎನ್.ಪಿ ಉಮಾ, ಅಶೋಕ ಕಟ್ಟಿಮನಿ, ಅನೀಲ ಘನಾತೆ, ಮೀನಾಕ್ಷಿ ಅಂಬೂರೆ, ಕನ್ಯಾಕುಮಾರಿ ಮನಮಿ, ಸುಆಭಷ ಜಮಗೊಂಡ, ಎಸ್.ಎನ್ ಗಣಿ, ಎಸ್.ಜಿ ಪಾಟೀಲ್, ಜಿ.ಆರ್ ಕುಲಕರ್ಣಿ, ಎಸ್.ಆರ್ ಸಣ್ಣೂರ, ಡಿ.ಎಂ ನದಾಫ್, ಜಿ.ಎಸ್ ಕಲ್ಲೋಣಿ, ಈರಣ್ಣ ಗುಣಾರಿ, ಸಿ.ವೈ ಪಾಟೀಲ್, ಶಿವಶಂಕರ ಚೌಧರಿ, ದೊಡ್ಡಪ್ಪಗೌಡ ಕೆಂಭಾವಿ, ದ್ವಿತಿಯ ದರ್ಜೆ ಸಹಾಯಕ ಶಿವಶಂಕರ ವಾಂಗೆ, ಅಹೀಲಾಬಾಯಿ ಹೊಸಮನಿ, ಪಾರ್ವತಿ ತೇಲಿ, ದತ್ತು ದೊಡ್ಮನಿ ಅವರಿಗೆ ವಿಶೇಷ ಉಡುಗೊರೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಂಜೂರ್ ಅಹ್ಮದ್ ಪಟೇಲ್, ಸದಾಶಿವ ಮೇತ್ರಿ, ಸಿದ್ರಾಮಪ್ಪ ಮನಮಿ, ಮಲ್ಲಿಕಾರ್ಜುನ ಶೆಟ್ಟಿ, ರಾಜೇಶ ನಾಕೇದಾರ, ಮಲ್ಲಿಕಾರ್ಜುನ ಹಿರೇಮಠ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

