ಶಿರಶ್ಯಾಡ ಸಂಸ್ಥಾನ ಹಿರೇಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯರು ಅಭಿಮತ
ಉದಯರಶ್ಮಿ ದಿನಪತ್ರಿಕೆ
ಇಂಡಿ: ಡಿ.ಕೆ.ಶಿವಕುಮಾರ ಅವರು ಸಂಘಟನಾ ಚತುರರಾಗಿದ್ದು ಮುಖ್ಯಮಂತ್ರಿ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುತ್ತಾರೆ. ಹಾಗಾಗಿ ಕಾಂಗ್ರೇಸ್ ಹೈಕಮಾಂಡ್ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಶಿರಶ್ಯಾಡ ಸಂಸ್ಥಾನ ಹಿರೇಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯರು ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಪ್ರಬಲ ಸಮುದಾಯದವರೂ ಆಗಿದ್ದಾರೆ. ಅವರ ಬೆನ್ನಿಗೆ ಹಲವು ಶಾಸಕರೂ ಇದ್ದಾರೆ. ಅದನ್ನು ಮನಗಂಡು ಕಾಂಗ್ರೇಸ್ ಹೈಕಮಾಂಡ್ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.
ಹಿಂದುಳಿದಿರುವ ಗಡಿ ತಾಲೂಕು ಅಭಿವೃಧ್ಧಿ ಮಾಡಲು ಇಂಡಿಗೆ ಸಚಿವ ಸ್ಥಾನದ ಅವಶ್ಯಕತೆ ಇದೆ. ಸ್ವಾತಂತ್ರಾö್ಯ ನಂತರ ಒಮ್ಮೆಯೂ ಇಂಡಿ ಮತಕ್ಷೇತ್ರಕ್ಕೆ ಸಚಿವ ಸ್ಥಾನ ಸಿಕ್ಕಿಲ್ಲ. ಹೀಗಾಗಿ ಈ ಬಾರಿಯಾದರೂ ಸಚಿವ ಸ್ಥಾನ ವಂಚಿತ ಇಂಡಿ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡಬೇಕು. ನಂಜುಂಡಪ್ಪ ವರದಿಯಂತೆ ಗಡಿ ಬಾಗದ ಇಂಡಿ ತಾಲೂಕು ಅತೀ ಹಿಂದುಳಿದ ಪ್ರದೇಶವಾಗಿದೆ. ಹೆಚ್ಚಿನ ಅಭಿವೃಧ್ಧಿಗೆ ಸಚಿವ ಸ್ಥಾನದ ಅವಶ್ಯಕತೆ ಇದ್ದು ಇಂಡಿ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡಲೇಬೇಕೆಂದು ಒತ್ತಾಯಿಸಿದರು.

