ಉದಯರಶ್ಮಿ ದಿನಪತ್ರಿಕೆ
ವಿಜಯಪುರ. ಮಾನವನಿಗೆ ಗುರುವಿನ ಅಸ್ತಿತ್ವ ಬಹಳ ಮುಖ್ಯ. ಗುರು ಇಲ್ಲದಿದ್ದರೆ ಬದುಕು ಅಪೂರ್ಣವಾಗುತ್ತದೆ. ಗುರುವಿನ ಅಣತಿಯಂತೆ ನಡೆದರೆ ಬದುಕು ಬಂಗಾರವಾಗುತ್ತದೆ. ಎಂದು ಮರೆಗುದ್ದಿ ದಿಗಂಬರೇಶ್ವರ ಮಠದ ತೋಂಟದಾರ್ಯ ಸ್ವಾಮೀಜಿ ಹೇಳಿದರು.
ಬಬಲೇಶ್ವರ ತಾಲೂಕ ಚಿಕ್ಕಗಲಗಲಿಯ ಸಾಯಿಬಾಬಾ ಆಶ್ರಮದಲ್ಲಿ ಏರ್ಪಡಿಸಿದ ” ಗುರು ಪೂರ್ಣಿಮಾ ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಸಾಯಿಬಾಬಾ ಆಶ್ರಮದ ಚಮನಸಾಬ ಬಾಬಾ ಅವರು ನೊಂದವರ ಕಣ್ಣೀರೊರೆಸುವ ಗುರು ಆಗಿದ್ದಾರೆ. ಅವರ ಪ್ರೀತಿ ಮತ್ತು ಮಾರ್ಗದರ್ಶನ ಭಕ್ತರಿಗೆ ಒಳಿತು ಮಾಡಲಿ ಎಂದರು.
ಕಾರ್ಯಕ್ರಮ ಕುರಿತು ಉಪನ್ಯಾಸ ನೀಡಿದ ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ (ಪಡಗಾನೂರ) ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲಿ ಗುರುವಿನ ಅವಶ್ಯಕತೆ ಇರುತ್ತದೆ. ತಾಯಿ ಮೊದಲ ಗುರುವಾಗಿ ನಂತರ ಧರ್ಮಗುರು, ವಿಧ್ಯಾಗುರು, ಸ್ನೇಹಗುರು, ಕುಟುಂಬಗುರು, ಸಮಾಜಗುರು ಹೀಗೆ ವಿವಿಧ ರೂಪಗಳಲ್ಲಿ ಗುರುವಿನ ಅಸ್ತಿತ್ವ ಕಾಣುತ್ತೇವೆ. ಭಗವಂತನ ಇರುವಿಕೆ ತೋರುವವನೆ ಗುರು ಅದಕ್ಕಾಗಿ ಗುರು ಶ್ರೇಷ್ಠ ಎನಿಸಿದ್ದಾನೆ ಎಂದರು.
ಕೆಂಗಲಗುತ್ತಿ- ಜಂಬಗಿ ಹಿರೇಮಠದ ಪೂಜ್ಯ ಅಡವಿಸಿದ್ದೇಶ್ವರ ಸ್ವಾಮೀಜಿ ಮತ್ತು ಚಿಕ್ಕಲಕಿ ಭಗೀರಥ ಪೀಠದ ಶಿವಾನಂದ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು.
ಸಾಯಿಬಾಬಾ ಆಶ್ರಮದ ಪೂಜ್ಯ ಚಮನಸಾಬ ಬಾಬಾ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಬಿದರಿ ಕಲ್ಮಠದ ಬಸಯ್ಯ ಹೀರೆಮಠ, ಕಣಬೂರದ ರಾಚಯ್ಯ ಪೂಜಾರಿ, ಪ್ರವಚನಕಾರ ಹಣಮಂತ ಮಂಟೂರ, ಮಕ್ತುಮಸಾಬ ಮಂಟೂರ ಮಾತನಾಡಿದರು.
ಕಾರ್ಯಕ್ರಮದಲ್ಲಿ ೧೦೮ ಮುತ್ತೈದಿಯರಿಗೆ ಉಡಿ ತುಂಬಲಾಯಿತು. ನಂತರ ಸಾಹಿಬಾಬಾರ ರಥೋತ್ಸವ ಮಡೆಯಿತು. ಸಾಧಕರಿಗೆ – ದಾನಿಗಳಿಗೆ ಸನ್ಮಾನ ಮಾಡಲಾಯಿತು.
ಕಲಾವಿದ ಕಲ್ಲಪ್ಪ ಶಿರಬೂರ ನಿರೂಪಿಸಿದರು. ಪಾಂಡು ಚಿಗದಾನಿ ಸ್ವಾಗತಿಸಿದರು. ಕವಿ ಪತ್ತೆಖಾನ ವಂದಿಸಿದರು.

