ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಪಂ ನೌಕರರು ತಾಪಂ ಕಾರ್ಯಾಲಯ ಎದುರು ಧರಣಿ ನಡೆಸಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಾತನಾಡಿ, ಕಾರ್ಮಿಕ ವಿರೋಧಿ ನಾಲ್ಕು ಲೇಬರ್‌ಕೋಡ್‌ಗಳ ಜಾರಿ ಮಾಡಬಾರದು. ₹31 ಸಾವಿರ ವೇತನ ನಿಗದಿಗೊಳಿಸಬೇಕು. ಪಿಂಚಣಿ, ಸೇವಾ ಹಿರಿತನ ಭತ್ಯೆ ಹೆಚ್ಚಳ. ಪಂಚಾಯತಿಗೆ ಒಂದು ಎಸ್.ಡಿ.ಎ., 2ನೇ ಡಿಇಒ ನೇಮಕಾತಿ ಮಾಡಬೇಕು. ಆರೋಗ್ಯ ವಿಮೆ ಜಾರಿಗೊಳಿಸಬೇಕು. ಸ್ವಚ್ಛ ವಾಹಿನಿಯರ ಒಡಂಬಡಿಕೆ ರದ್ದು ಮಾಡಿ, ತರಬೇತಿ ಪಡೆದ ಎಲ್ಲರಿಗೂ ಕಡ್ಡಾಯ ಕೆಲಸಕ್ಕೆ ₹7500 ಗೌರವಧನ ನೀಡಬೇಕು. ಸಿಂಗಲ್ ಚಾಲಕರನ್ನು ಪರಿಗಣಿಸಿ ₹15 ಸಾವಿರ ಗೌರವಧನ ನೀಡಬೇಕೆಂದು ಆಗ್ರಹಿಸಿದರು.
ಭೀರಪ್ಪ ಮರನೂರ ಬಸವರಾಜ ಮಾಚಕನೂರ ಶ್ರೀಧರ ಸಪ್ತಸಾಗರ ನಿಂಗವು ಇಲ್ಲೇಳಿ, ಧರೆಪ್ಪ ಕಂಬುಗಿ, ದಯಾನಂದ ಕವಟಗಿ, ಅಮಿತ ತಿರೋಳ, ದೊಡ್ಡವ್ವ ಪೂಜಾರಿ, ಶಕುಂತಲಾ ದೊಡಮನಿ ತೂಗವ್ವ ಛಲವಾದಿ, ಮಹಾದೇವ ಕಾಂಬಳೆ, ಸರಸ್ವತಿ ಕಾಂಬಳೆˌ ಭರತ ಮಾದರ ಬಾಗವ್ವ ಕುರಣಿ, ಶೄತಿ ಸಂತ ಇತರರು ಇದ್ದರು.

