ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ ಅಧ್ಯಕ್ಷತೆಯಲ್ಲಿ ಜು.೧೧ ರಂದು ಬೆಳಗ್ಗೆ ೧೧.೩೦ ಗಂಟೆಗೆ ಸಾಮಾನ್ಯ ಸಭೆ ಜರುಗಲಿದೆ.
ಸಭೆಯಲ್ಲಿ ಹಿಂದಿನ ಸಭೆಯ ನಡವಳಿಗಳನ್ನು ಓದಿ ದೃಢಿಕರಿಸುವದು. ಏಪ್ರೀಲ್, ಮೇ ಮತ್ತು ಜೂನ-೨೦೨೫ ಜಮಾ ಖರ್ಚು ಓದಿ ದೃಢೀಕರಿಸುವದು. ೧೫ ನೇ ಹಣಕಾಸು ಮತ್ತು ಎಫ್.ಎಪ್.ಸಿ. ಯೋಜನೆಯ ಟೆಂಡರ್ ದರಗಳಿಗಂ ಮಂಜೂರಾತಿ ನೀಡುವ ಕುರಿತು.ಮೆಗಾ ಮಾರುಕಟ್ಟೆಯ ವಾಹನ ನಿಲುಗಡೆ ಸ್ಥಳದಲ್ಲಿ ವಾಹನ ನಿಲ್ಲಿಸಲು ಪಾರ್ಕಿಂಗ್ ಶುಲ್ಕವನ್ನು ವಿಧಿಸಲಾಗುತ್ತಿದೆ. ಇದನ್ನು ಬಹಿರಂಗ ಹರಾಜು ಮೂಲಕ ಹೊರಗುತ್ತಿಗೆ ನೀಡುವ ಕುರಿತು, ನೀರು ಶುದ್ಧೀಕರಣ ಘಟಕಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ವಾರ್ಷಿಕ ನಿರ್ವಹಣೆ ನೀಡುವದು.ನೀರು ಶುದ್ಧಿಕರಣ ಘಟಕಗಳನ್ನು ಹೊರಗುತ್ತಿಗೆ ನೀಡುವ ಕುರಿತು ಸೇರಿದಂತೆ ವಿವಿಧ ವಿಷಯಗಳನ್ನು ಚರ್ಚಿಸಲಾಗುವದು ಎಂದು ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ತಿಳಿಸಿದ್ದಾರೆ.
