Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಜಾಬ್ ಕಾರ್ಡ್ ಮೇಳಕ್ಕೆ ತಾಪಂ ಇಓ ಅನಸೂಯಾ ಚಾಲನೆ

ವಿಜಯಪುರ ಜಿಲ್ಲೆಗೆ 371(ಜೆ) ಮೀಸಲಾತಿ ಪ್ರಸ್ತಾವನೆ ಕಳಿಸಲು ಒತ್ತಾಯ

ವಿಬಿಜಿ–ರಾಮ್–ಜಿ ಕಾಮಗಾರಿಗಳಿಗೆ ವೇಗದ ಸ್ಪರ್ಶ ನೀಡಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಗುರು ಸ್ಮರಣೆಯ ಪುಣ್ಯದಿನ ಗುರು ಪೌರ್ಣಿಮೆ
ವಿಶೇಷ ಲೇಖನ

ಗುರು ಸ್ಮರಣೆಯ ಪುಣ್ಯದಿನ ಗುರು ಪೌರ್ಣಿಮೆ

By No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಇಂದು (ದಿ.10/7/2025 ಗುರುವಾರ) ಉತ್ತರ ಕರ್ನಾಟಕದ ಸತ್ಸಂಗವೆಂದೇ ಹೆಸರಾದ ವಿಜಯಪುರದ ಜ್ಞಾನಯೋಗಾಶ್ರಮದ ಗುರು ಪೌರ್ಣಿಮೆಯ ನಿಮಿತ್ತ ಈ ವಿಶೇಷ ಲೇಖನ

ಲೇಖನ
– ಜಿ. ಬಿ. ಸಾಲಕ್ಕಿ
ವಿಜಯಪುರ

ಉದಯರಶ್ಮಿ ದಿನಪತ್ರಿಕೆ

ಗುರು ಕಾರುಣ್ಯವೇ ಸದಾಚಾರ
ಗುರು ಕಾರುಣ್ಯವೇ ಶಿವಾಚಾರ
ಗುರು ಕಾರುಣ್ಯವೇ ಪ್ರಸಾದ ರುಚಿ
ಮುಂದೆ ಗುರು ಹಿಂದೆ ಲಿಂಗ
*ಕೂಡಲ ಸಂಗಮದೇವ

ಅಜ್ನಾನದ ಕತ್ತಲನ್ನು ಕಳಚಿ ಸುಜ್ನಾನದ ಬೀಜ ಬಿತ್ತುವ ಗುರುವಿಗೆ ಭಾಸ್ಕರ ನೆಂದು ಗೌರವಿಸುವ ಪರಂಪರೆ ಹಿಂದು ಸಂಸ್ಕೃತಿಯ ಭವ್ಯ ಇತಿಹಾಸ. ಪ್ರಣತೆ ಕಪ್ಪಾದರೇನು, ಬಿಳಿದಾದರೇನು, ಬೆಳ್ಳಿ ಬಂಗಾರದ್ದಾದರೂ ನೀಡುವ ಬೆಳಕು ಆದ್ಭುತ ಅದು ಜ್ನಾನಾಮೃತ. ನಮ್ಮ ನೆಲದ ತತ್ವಜ್ನಾನಿಗಳಲ್ಲದೇ, ಪಾಶ್ಚಿಮಾತ್ಯ ದಾರ್ಶನಿಕರೂ ಗುರು ಶಿಷ್ಯ ರನ್ನು ಸೂರ್ಯ ಹೂ ಗಳಿಗೆ ಹೋಲಿಸಿದ್ದು ಆ ಗುರು ಶಿಷ್ಯ ಪರಂಪರೆಯ ಮಹತ್ವ. ಭಾರತೀಯರಲ್ಲಿ ರಾಮಕೃಷ್ಣ ಪರಮಹಂಸ ಸ್ವಾಮಿ ವಿವೇಕಾನಂದರ ಗುರು ಭಕ್ತಿ ಮೇಲ್ಮಟ್ಟದ್ದು. ಈ ನೆಲೆಯಲ್ಲಿ ವಿಶ್ವದ ಗುರು ಸಂತ ಶ್ರೇಷ್ಟರ ಸ್ಮರಣೆ ಮಾಡುವ ಪುಣ್ಯ ಪರ್ವ ಗುರು ಪೌರ್ಣಿಮೆ ಕಡಲೆಗಾರ ಹುಣ್ಣಿಮೆಯ ದಿನ.
ಜ್ನಾನಯೋಗಾಶ್ರಮದ ಗುರು ವಂದನೆ


ಗುರು ಶಿವಾನಂದರ ಆಣತಿಯಂತೆ ಜ್ನಾನ ದಾಸೋಹವನ್ನೇ ಆದ್ಯ ಧರ್ಮ ವಾಗಿಸಿ ಗದಗಿನಿಂದ ವಿಜಯಪುರ ವನ್ನು ಕರ್ಮ ಭೂಮಿಯನ್ನಾಗಿಸಿ ನಿಜಗುಣರು, ಬುದ್ಧ, ಬಸವ, ಅಲ್ಲಮ ಮಂತಾದ ಶರಣ ಸಂಕುಲ ದ ವಚನ, ತತ್ವ ಗಳನ್ನು ಶಿಷ್ಯ ಕೋಟಿಯ ಮನದಾಳಕ್ಕೆ ತಲುಪಿಸುವ ಹಂಬಲದ ಮಾತೃಹೃದಯದ
ಶ್ರೀ ಮಲ್ಲಿಕಾರ್ಜುನ ರ ಪರಿಕಲ್ಪನೆ ವಿಜಯಪುರ ನಗರ ಮಧ್ಯದ ಶ್ರೀ ಸಿದ್ದೇಶ್ವರ ದೇವಸ್ದಾನದ ಪಕ್ಕದಲ್ಲೇ ಶಿವಾನುಭವ ಮಂಟಪದ ಸ್ಥಾಪನೆ ಆದರಲ್ಲಿ ನಿತ್ಯ ಶಿವಾನುಭವ ಗೋಷ್ಟಿ. ನಗರದ ಕರಡಿ ತೋಟದಲ್ಲಿ ವಾಸ್ತವ್ಯ ವಿಜಯಪುರದಲ್ಲಿ ವಾಸ್ತವ್ಯ ವಿದ್ದಷ್ಟು ದಿನ ಶಿವಾನುಭವ ಗೋಷ್ಟಿ. ಗುರು ಮಲ್ಲಿಕಾರ್ಜುನರ ಜ್ನಾನ ಕ್ಕೆ ತಲೆಬಾಗಿ ಆವರ ಪ್ರವಚನ ಸ್ಥಳಗಳಿಗೆ ಹೋದಾಗ ಆಕರ್ಷಿತರಾದ ಬಿಜ್ಜರಗಿಯ ಓಗೆಪ್ಪ ಗೌಡರ ಸುಪುತ್ರ ಶ್ರೀ ಸಿದ್ದನಗೌಡರು ಶ್ರೀಗುರುವಿನ ಶಿಷ್ಯತ್ವ ಸ್ವೀಕರಿಸಿ ನಂತರ ತಮ್ಮ ಅಪಾರ ಜ್ನಾನ, ನಡೆ ನುಡಿಗಳನ್ನೊಂದಾಗಿಸಿದ ವಿಶ್ವ ಸಂತ ಶ್ರೀ ಸಿದ್ದೇಶ್ವರ ರಾದರು.
ಕರಡಿ ತೋಟದ ತಮ್ಮ ವಾಸ್ತವ್ಯ ವನ್ನು ಶ್ರೀಗುರು ಮಲ್ಲಿಕಾರ್ಜುನರು ನಗರದ ಉತ್ತರ ದಿಕ್ಕಿನ ಸೋಲಾಪೂರ ರಸ್ತೆಯಲ್ಲಿ ವಿಶಾಲವಾದ ಬಯಲು ಹೊಲ ಪಡೆದು ಅಲ್ಲಿ ಭವ್ಯ ಆಶ್ರಮವನ್ನು ಶಿಷ್ಯ ಬಳಗದವರ ಕಾಯಕದಿಂದಲೇ ನಿರ್ಮಿಸಿ, ಜ್ನಾನಕ್ಕಾಗಿ ಆರಿಸಿ ಬಂದ ಶೀಷ್ಯ ಬಳಗಕ್ಕೆ ಆಶ್ರಯ ನೀಡಿ ಜ್ನಾನಯೋಗಾಶ್ರಮ ಸ್ಥಾಪಿಸಿದರು.ಮಲ್ಲಿಕಾರ್ಜುನ ಶ್ರೀ ಗಳು ಶಿಷ್ಯ ಸಿದ್ದೆಶ್ವರ ರೊಂದಿಗೆ ಕರ್ನಾಟಕ, ಮಹಾರಾಷ್ಟ್ರಗಳಲ್ಲಿ ಭಕ್ತಿ ಪ್ರವಚನ ನೀಡಿ ದಾರ್ಶನಿಕರಾದರು. ಎಷ್ಟೋ ವೖಚಾರಿಕ ಭಕ್ತಿಯ ಗ್ರಂಥಗಳು ರಚಿತವಾದವು.
ಶ್ರೀ ಮಲ್ಲಿಕಾರ್ಜುನ ಶ್ರೀಗಳು ತಮ್ಮ ಎಂಭತ್ತನೆಯ ವಯಸ್ಸಿನಲ್ಲಿ 1985 ರ ಅಗಷ್ಟ 2 ರಂದು ಬಯಲಾದರು. ಅವರ ಆಶಯದಂತೆ ಪ್ರತಿ ಕಡಲೇಗಾರ ಹುಣ್ಣಿಮೆಯ ದಿನ ಗುರು ಪೌರ್ಣಿಮೆ ಆಚರಿಸಿ ವಿಶ್ವದ ಎಲ್ಲ ಸಂತ ಗುರು ಪರಂಪರೆಯನ್ನು ಸ್ಮರಿಸುವದು ನಡೆದೇ ಇದೆ. ಕರ್ನಾಟಕ ಮಹಾರಾಷ್ಟ್ರದ ಸುಮಾರು ಐವತ್ತು ಸಾವಿರ ಭಕ್ತರಿಂದ ಕೋಟಿ ಜಪ ಯಜ್ನ, ವಿಜಯಪುರದ ಆಶ್ರಮದಲ್ಲಿ ಗುರು ಸ್ಮರಣೆ ನಡೆಯಲಿದ್ದೂ ಇದೊಂದು ಉತ್ತರ ಕರ್ನಾಟಕದ ಸತ್ಸಂಗ ವೆನಿಸಿದೆ.


ಹೊದ್ದ ಕಂಬಳಿ, ಮೆಟ್ಟ ಪಾದುಕೆ, ಕೖಯಲ್ಲಿಯ ಊರು ದಂಡ ಗುರು ಮಲ್ಲಿಕಾರ್ಜುನರ ಆಸ್ತಿಯಾದರೆ, ಶ್ವೇತ ಲುಂಗಿ, ಕಿಸೆಯಿಲ್ಲದ ಬಿಳಿ ಲುಂಗಿಯ ದುಡ್ಡು ಮುಟ್ಟದ ಶತಮಾನದ ಸಂತನೆಂದು ನಾಡಿಗೆ ಹೆಸರಾದವರು
ಶ್ರೀ ಸಿದ್ದೆಶ್ವರ ಶ್ರೀಗಳು ದೇಶ ವಿದೇಶಗಳಲ್ಲಿ ಜ್ನಾನ ದಾಸೋಹ ಮಾಡುತ್ತ ವಿಶ್ವ ದಾರ್ಶನಿಕರಾದ ಝೆನ್, ಅರಿಸ್ಟಾಟಲ್, ಪ್ಲ್ಯಾಟೋ, ಅಲ್ಲಮ, ಬಸವ, ಬುದ್ದ ಪೖಗಂಬರರ ಸಾಲಿಗೆ ಸೇರಿದವರಾಗಿದ್ದಾರೆ.
ಭಾರತ ಸರಕಾರ ಪದ್ಮಶ್ರೀ, ಗೌರವ ಡಾಕ್ಟರೇಟ್ ಪದವಿ ಯ ಪ್ರಸ್ತಾವನೆ ಮಾಡಿದರೂ, ಜ್ಞಾನ ಯೋಗಾಶ್ರಮ ಭಕ್ತರಿಂದ ನಡೆಯುವ ಸನ್ಯಾಸ ಆಶ್ರಮ ಎಲ್ಲವೂ ಭಕ್ತರ ಸಹಾಯದಿಂದ ನಡೆಯುವದೆಂದು ನಯವಾಗಿ ದೂರ ಸರಿದದ್ದು ಈಗಿನ ದಿನಮಾನದ ದಾಖಲೆ.
ಸತ್ಯವೂ ಅಲ್ಲ, ಅಸತ್ಯವೂ ಅಲ್ಲ,ಸಹಜವೂ ಆಲ್ಲ, ಅಸಹಜವೂ ಅಲ್ಲ,ಇಲ್ಲಾ ಇಲ್ಲಾ ಎಂಬುದು ತಾನಿಲ್ಲ ಗುಹೇಶ್ವರ ನೆಂಬುದು ತಾ ಬಯಲು ಎನ್ನುತ್ತ ತಮ್ಮ ಇರುವಿಕೆಯ ಯಾವ ಕುರುಹೂ ಬೇಡವೆನ್ನುತ್ತ ಯಾವ ಸ್ಥಾವರವಿಲ್ಲದೇ ಆಶ್ರಮದ ಗಿಡ ಟೊಂಗೆ, ಹೂ ಗಳ ಮಧ್ಯ ಸದಾ ಇರುವದಾಗಿ 2023 ಜನೇವರಿ ಎರಡರಂದು ಬಯಲಲ್ಲಿ ಬಯಲಾಗಿ ಭಕ್ತ ಸಮುದಾಯದ ಶತಮಾನದ ಸಂತ ಬುದ್ದೀಜೀ ಯಾದವರು ಶ್ರೀ ಸಿದ್ದೆಶ್ವರ ಶ್ರೀಗಳು.. ಮಲ್ಲಿಕಾರ್ಜುನ ಶ್ರೀಗಳು, ಶ್ರೀ ಸಿದ್ದೇಶ್ವರ ಶ್ರೀಗಳೊಂದಿಗೆ ವಿಶ್ವದ ಗುರು ಪರಂಪರೆಯನ್ನು ಸ್ಮರಿಸುವ ನೆಲೆಯಲ್ಲಿ ಇದೇ ದಿ. 20/7/2025 ಗುರುವಾರ ದಂದು ಜ್ಞಾನ ಯೋಗಾಶ್ರಮದಲ್ಲಿ ಗುರು ಪೌರ್ಣಿಮೆಯ ಭಕ್ತಿ ಸಂಭ್ರಮ ನಡೆಯಲಿದೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಜಾಬ್ ಕಾರ್ಡ್ ಮೇಳಕ್ಕೆ ತಾಪಂ ಇಓ ಅನಸೂಯಾ ಚಾಲನೆ

ವಿಜಯಪುರ ಜಿಲ್ಲೆಗೆ 371(ಜೆ) ಮೀಸಲಾತಿ ಪ್ರಸ್ತಾವನೆ ಕಳಿಸಲು ಒತ್ತಾಯ

ವಿಬಿಜಿ–ರಾಮ್–ಜಿ ಕಾಮಗಾರಿಗಳಿಗೆ ವೇಗದ ಸ್ಪರ್ಶ ನೀಡಿ

ಗ್ರಂಥಾಲಯಗಳು ಜನಸಾಮಾನ್ಯರ ವಿಶ್ವವಿದ್ಯಾಲಯಗಳು

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಜಾಬ್ ಕಾರ್ಡ್ ಮೇಳಕ್ಕೆ ತಾಪಂ ಇಓ ಅನಸೂಯಾ ಚಾಲನೆ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಜಿಲ್ಲೆಗೆ 371(ಜೆ) ಮೀಸಲಾತಿ ಪ್ರಸ್ತಾವನೆ ಕಳಿಸಲು ಒತ್ತಾಯ
    In (ರಾಜ್ಯ ) ಜಿಲ್ಲೆ
  • ವಿಬಿಜಿ–ರಾಮ್–ಜಿ ಕಾಮಗಾರಿಗಳಿಗೆ ವೇಗದ ಸ್ಪರ್ಶ ನೀಡಿ
    In (ರಾಜ್ಯ ) ಜಿಲ್ಲೆ
  • ಗ್ರಂಥಾಲಯಗಳು ಜನಸಾಮಾನ್ಯರ ವಿಶ್ವವಿದ್ಯಾಲಯಗಳು
    In (ರಾಜ್ಯ ) ಜಿಲ್ಲೆ
  • ವಿಬಿ ಜಿ ರಾಮ್ ಜಿ ಕಾಮಗಾರಿಗಳಿಗೆ ವೇಗ ನೀಡಲು ಸಿಇಒ ಸೂಚನೆ
    In (ರಾಜ್ಯ ) ಜಿಲ್ಲೆ
  • ಸುಸ್ಥಿರ, ಆರೋಗ್ಯಯುತ ಭಾರತಕ್ಕಾಗಿ ಕಂಕಣಬದ್ಧರಾಗಿ
    In (ರಾಜ್ಯ ) ಜಿಲ್ಲೆ
  • ಸ್ವಾರ್ಥಬಿಟ್ಟು ಬಾಳೋಣ, ಮಾನವೀಯತೆ ಮೆರೆಯೋಣ
    In ವಿಶೇಷ ಲೇಖನ
  • ಹೆಣ್ಣಿನ ಜೀವನವನ್ನು ಮರುರೂಪಿಸಿದ ಸುಧಮ್ಮನ ಕೃತಿ
    In ವಿಶೇಷ ಲೇಖನ
  • ರಾಯಣ್ಣ ಉತ್ಸವ ಪೂರ್ವಭಾವಿ ಸಭೆ :ಆ.23 ರಂದು ಉತ್ಸವ
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಆಗಸ್ಟ್ 18, 2026
    In ದಿನಪತ್ರಿಕೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.