ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಇಂದಿನ ಯುವಕರಿಗೆ ಸ್ಪೂರ್ತಿ ತುಂಬುವ ನಿಟ್ಟಿನಲ್ಲಿ ವಿದ್ಯಾರ್ಥಿಗಳೊಂದಿಗೆ ಪರಿಣಿತರ ಸಂವಾದ ಕಾರ್ಯಕ್ರಮ ಅತ್ಯವಶ್ಯ ಎಂದು ಇತ್ತಿಚೆಗೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ೫೮೨ ರ‍್ಯಾಂಕ ಪಡೆದ ಡಾ.ಮಹೇಶ ಮಡಿವಾಳರ ಹೇಳಿದರು.
ಪಟ್ಟಣದ ಎಲೈಟ್ ಪ್ರಾಥಮಿಕ, ಪ್ರೌಢಶಾಲೆ ಹಾಗೂ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜೊತೆ ಹಮ್ಮಿಕೊಂಡ ಸಂವಾದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಸ್ವೀಕರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಗುರಿ ತಲುಪಲು ವಿದ್ಯಾಭ್ಯಾಸದೆಡೆಗೆವ ಹೆಚ್ಚಿನ ಗಮನ ಹರಿಸಬೇಕು. ಈ ಯುಗವನ್ನು ಸ್ಪರ್ಧಾತ್ಮಕ ಯುಗವೆಂದು ಕರೆಯಲಾಗುತ್ತಿದೆ. ಹಾಗಾಗಿ ವಿದ್ಯಾರ್ಥಿಗಳು ಎಷ್ಟೇ ಓದಿದರು ಕಡಿಮೆ. ನಮ್ಮ ಗುರಿಯನ್ನು ತಲುಪಲು ಸದಾ ನಾವು ಓದಿನಲ್ಲಿ ನಿರತರಾಗಬೇಕು. ಅಂದಾಗ ತಂದೆ ತಾಯಿಗಳ ಕನಸು ನನಸಾಗಿಸಲು ಸಾಧ್ಯ. ಈ ವಯಸ್ಸಿನಲ್ಲಿ ಯಾವುದೇ ಕಡೆ ಚಿತ್ತವನ್ನು ಹರಿಸದೇ ಮಸ್ತಕಕ್ಕೆ ಪುಸ್ತಕದ ಚಿತ್ತವನ್ನು ಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಸಂಸ್ಥೆಯ ಅಧ್ಯಕ್ಷ ಮಹಿಬೂಬ ಅಸಂತಾಪೂರ, ಪ್ರಾಚಾರ್ಯ ಇಜಾಜ್ ಜುಮನಾಳ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.

