ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಗ್ರಾಮದ ಆರಾದ್ಯದೇವ ಶ್ರೀ ಪ್ರಭುಲಿಂಗೇಶ್ವರರ ಹರಿವಾಣೋತ್ಸವ ಹಾಗೂ ರುದ್ರಾಭಿಷೇಕ ಮಹಾಮಂಗಲ ಕಾರ್ಯಕ್ರಮ ವಿಜ್ರಂಭಣೆಯಿಂದ ನಡೆಯಿತು.
ಹರಿವಾಣೋತ್ಸವದ ನಿಮಿತ್ಯ ಕಳೆದ ಹನ್ನೊಂದು ದಿನಗಳಿಂದ ಪ್ರತಿದಿನ ಮುಂಜಾನೆ ೪ ಘಂಟೆಯಿಂದ ೭.೩೦ ಘಂಟೆಗಳವರೆಗೆ ನಡೆಯುತ್ತಿರುವ ರುದ್ರಾಭಿಷೇಕ, ಮಹಾಪೂಜೆಯ ಮಂಗಲೋತ್ಸವಕ್ಕೆ ಗ್ರಾಮದ ರೈತರು ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ನಂತರನಡೆದ ಪಲ್ಲಕ್ಕಿ ಉತ್ಸವದಲ್ಲಿ ಜಗಜ್ಯೋತಿ ಶ್ರೀ ಬಸವಣ್ಣನವರ ಭಾವಚಿತ್ರವನ್ನು ಅಲಂಕ್ರತ ಪಲ್ಲಕ್ಕಿಯಲ್ಲಿಟ್ಟು, ಮಹಿಳೆಯರಿಂದ ಆರತಿ, ಕುಂಭಮೇಳ, ಸಕಲ ವಾದ್ಯ ವೃಂದಗಳೊಂದಿಗೆ ಬಸ್ ನಿಲ್ದಾನದ ಹತ್ತಿರವಿರುವ ಬಸವೇಶ್ವರ ವೃತ್ತದಿಂದ ಶ್ರೀ ಪ್ರಭುಲಿಂಗೇಶ್ವರ ದೇವಸ್ಥಾನದ ವರೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತ ಬಸವಣ್ಣನವರಿಗೆ ಜಯಘೋಷ ಮಾಡಲಾಯಿತು.
ನಂತರ ಶ್ರೀ ಪ್ರಭುಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಹರಿವಾಣ ತುಂಬುವ ಕಾರ್ಯಕ್ರಮದಲ್ಲಿ ಗ್ರಾಮದ ರೈತರು ತಾವು ಬೆಳೆದ ಕಬ್ಬು, ಬಾಳೆ, ತೆಂಗು ಸೇರಿದಂತೆ ವಿವಿಧ ಹಣ್ಣು ಹಂಫಲಗಳ ರಾಶಿಗಳಿಂದ ಹರಿವಾಣ ತುಂಬಿಸಲಾಗುತ್ತದೆ ಕೆಳಗೆ ಬಿದ್ದ ಹರಿವಾನ ಯಾರಿಗೆ ದೊರೆಯುವುದೋ ಅವರ ಇಷ್ಠಾರ್ಥಗಳನ್ನು ಶ್ರೀ ಪ್ರಭುಲಿಂಗೇಶ್ವರ, ಬಸವಣ್ಣನವರು ನೆರವೇರಿಸುತ್ತಾರೆಂಬ ಪ್ರತೀತಿ ಇದೆ. ಇದರೊಂದಿಗೆ ಹರಿವಾಣದ ನಿಮಿತ್ಯ ಕಳೆದ ಹತ್ತು ದಿನಗಳಿಂದ ಸ್ಥಳಿಯ ಗದ್ದಿಗೆಗುಡಿಯಲ್ಲಿ ನಡೆಯುತ್ತಿರುವ ರುದ್ರಾಭಿಷೇಕ ವಿಶೇಷ ಪೂಜೆಯೊಂದಿಗೆ ಮಹಾಮಂಗಲಗೊಂಡಿತು. ವಿರಕ್ತಮಠದ ಪ್ರಭು ಮಹಾಸ್ವಾಮಿಗಳು, ರಘುನಾಥ ಪ್ರಿಯ ಸಾಧು ಮಹಾರಾಜರ ಮಠದ ಜನಾರ್ಧನ ಮಹಾರಾಜರು ಕಾರ್ಯಕ್ರಮದ ನೇತ್ರತ್ವ ವಹಿಸಿದ್ದರು. ಗ್ರಾಮದ ಪ್ರಮುಖರಾದ ರಾಮಣ್ಣ ಮುಗಳಖೋಡ, ಪುಂಡಲಿಕಪ್ಪಾ ಪೂಜಾರಿ, ಬಾಳಪ್ಪಾ ಹಳಿಂಗಳಿ, ಅಣ್ಣಪ್ಪಗೌಡ ಪಾಟೀಲ, ರಾಮಣ್ಣ ಬಗನಾಳ, ರಾಚಯ್ಯ ಮಠಪತಿ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಗುರಲಿಂಗಪ್ಪಾ ಪೂಜಾರಿ, ಶಂಕರ ಬಟಕುರ್ಕಿ, ಪ್ರಭು ಪಾಲಭಾವಿ, ಅಶೋಕ ಧಡೂತಿ, ಪರಪ್ಪ ನೇಸೂರ, ಬಸವರಾಜ ಕುಂಚನೂರ, ಅಶೋಕ ಮೋಟಗಿ, ಪ್ರಭು ಮುಧೋಳ ಸೇರಿದಂತೆ ಹಲವಾರು ಜನ ಪ್ರಮುಖರು ಉಪಸ್ಥಿತರಿದ್ದರು.

