ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಜಾನುವಾರುಗಳು ರೈತರ ಬದುಕಿಗೆ ಅನಿವಾರ್ಯ ಎಂಬುದನ್ನು ಅರಿತು ಸರಕಾರ ಮಾರಕ ಕಾಲು ಮತ್ತು ಬಾಯಿ ಬೇನೆ ರೋಗದ ನಿಯಂತ್ರಣಕ್ಕೆ ಮುಂದಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಪಶು ವೈದ್ಯಕೀಯ ಇಲಾಖೆಯ ಆವರಣದಲ್ಲಿ ಸಿಂದಗಿ ಮತ್ತು ಆಲಮೇಲ ತಾಲೂಕಿನ ಎಲ್ಲ ಜಾನುವಾರುಗಳಿಗೆ ಹಾಕಲಾಗುವ ೭ನೆಯ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಏ.೨೬ ರಿಂದ ಜೂ.೦೯ರವರೆ ಈ ಲಸಿಕೆ ನೀಡಲಾಗುತ್ತದೆ. ಎಲ್ಲಾ ರೈತರು ತಮ್ಮ ತಮ್ಮ ಜಾನುವಾರುಗಳಿಗೆ ತಪ್ಪದೇ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಬೇಕು. ತಾಲೂಕಿನಲ್ಲಿ ಲಸಿಕೆದಾರರು ಎಲ್ಲಾ ಮನೆಗಳಿಗೆ ಭೇಟಿ ನೀಡಿ ಉಚಿತವಾಗಿ ಲಸಿಕೆ ಹಾಕಲಿದ್ದಾರೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.
ಈ ವೇಳೆ ತಾಲೂಕು ದಂಡಾಧಿಕಾರಿ ಪ್ರದೀಪಕುಮಾರ ಹಿರೇಮಠ, ತಾಲೂಕಾ ಮುಖ್ಯ ಪಶು ವೈದ್ಯಾಧಿಕಾರಿ ಡಾ.ರಾಮು ರಾಠೋಡ, ಪಶುವೈದ್ಯ ಡಾ.ಮಾರುತಿ ತಡಲಗಿ, ಡಾ.ಶರಣಗೌಡ ಬಿರಾದಾರ, ಪಶು ಪರೀಕ್ಷಕ ಸಂಘದ ಜಿಲ್ಲಾಧ್ಯಕ್ಷ ಪ್ರಭು ಬಿರಾದಾರ, ಜಾನುವಾರು ಅಭಿವೃದ್ಧಿ ಅಧಿಕಾರಿ ಎಚ್.ಎಸ್. ಸೀತಿಮನಿ, ಶ್ರೀನಿವಾಸ ಜೋಶಿ ಮತ್ತು ಹಿರಿಯ ಪಶು ಪರೀಕ್ಷಕ ಸುಭಾಸ ಬಗಲಿ, ಶಿವಶರಣ ಟೆಂಗಳಿ, ವಾಯ್.ಜಿ.ಚೌಧರಿ, ಪರಶುರಾಮ ಬಿಸಾನಾಳ, ಶಿವು ಗುಗ್ಗರಿ, ವಾಸಿಮ್ ತಾಂಬೋಳ್ಳಿ, ವಾಯ್.ಸಿ.ಮಯೂರ ಸೇರಿದಂತೆ ರೈತರು ಹಾಗೂ ಇಲಾಖೆಯ ಸಿಬ್ಬಂದಿಗಳು ಇದ್ದರು.

