ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಆರ್.ಡಿ.ಪಾಟೀಲ್ ಪದವಿ ಪೂರ್ವ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ದಿ.ನಾಗೇಶ ವಿಠ್ಠಲರಾವ್ ಕುಲಕರ್ಣಿ ಅವರ ಸ್ಮರಣಾರ್ಥ ತಾಯಿ ಮಂಡೋದರಿ ವಿಠ್ಠಲರಾವ್ ಕುಲಕರ್ಣಿ ಮತ್ತು ಸಹೋದರ ಬಿಂದುರಾವ್ ವಿಠ್ಠಲ್ ಕುಲಕರ್ಣಿ ಹಾಗೂ ತೃಪ್ತಿ ಕುಲಕರ್ಣಿ ಇವರುಗಳು ದಿ.ನಾಗೇಶ ಕುಲಕರ್ಣಿ ಅವರ ಹೆಸರಿನ ಮೇಲೆ ಕ್ರೀಡಾ ಚಟುವಟಿಕೆಗಳಿಗಾಗಿ ೧ಲಕ್ಷ ರೂ. ಚೆಕ್ಕನ್ನು ಸಂಸ್ಥೆಯ ಚೇರ್ಮನ್ನರಾದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಸಾರಂಗಮಠ ಸಿಂದಗಿ ಪೂಜ್ಯರಿಗೆ ಹಸ್ತಾಂತರಿಸಿದರು.
ಈ ವೇಳೆ ಸಂಗಮೇಶ ಜೋಶಿ, ಉಪನ್ಯಾಸಕ ಸಿದ್ದಲಿಂಗ ಕಿಣಗಿ ಇದ್ದರು.

