ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಗ್ರಾಮೀಣ ಭಾಗದ ಜನರಿಗೆ ನಿತ್ಯ ಸಂಚರಿಸಲು ಗ್ರಾಮೀಣ ರಸ್ತೆಗಳ ಸುಧಾರಣೆ ಅವಶ್ಯಕವಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ತಾಲೂಕಿನ ಗುಬ್ಬೇವಾಡ ಗ್ರಾಮದಲ್ಲಿ ನಡೆದ ಲೋಕೋಪಯೋಗಿ ಇಲಾಖೆಯ ೨೦೨೪-೨೫ ನೇ ಸಾಲಿನ ೫೦೫೪-ಅಪೆಂಡಿಕ್ಸ -ಇ ಯೋಜನೆಯಡಿಯಲ್ಲಿ ಕಲಕೇರಿ ಮುಖ್ಯ ರಸ್ತೆಯಿಂದ ಗುಬ್ಬೇವಾಡ ಗ್ರಾಮದವರಿಗೆ ೭೫ಲಕ್ಷ ರೂ.ಮೊತ್ತದ ಡಾಂಬರೀಕರಣ ರಸ್ತೆಯ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು, ಗ್ರಾಮೀಣ ರಸ್ತೆ ಸುಧಾರಣೆಗೆ ತಾಲೂಕಿನಲ್ಲಿ ಅನೇಕ ರಸ್ತೆಗಳು ಹದಗೆಟ್ಟಿರುವ ಬಗ್ಗೆ ಗಮನಕ್ಕಿದ್ದು ವಿವಿಧ ಯೋಜನೆಗಳಡಿ ಅನುದಾನ ತರುವ ಮೂಲಕ ಹಂತ-ಹಂತವಾಗಿ ರಸ್ತೆ ಸುಧಾರಣೆಗೆ ಆದ್ಯತೆ ನೀಡುವುದಾಗಿ ಹೇಳಿದರಲ್ಲದೇ ಸರಕಾರದಿಂದ ಅನುದಾನ ತಂದು ಗ್ರಾಮೀಣ ಅಭಿವೃದ್ಧಿಗೆ ಶ್ರಮಿಸುವದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರ ಪ್ರತಿನಿಧಿ ನಿತ್ಯಾನಂದ ಕಟ್ಟಿಮನಿ, ಮಾಜಿ ಜಿಪಂ ಉಪಾಧ್ಯಕ್ಷ ಮಲ್ಲಣ್ಣ ಸಾಲಿ, ಜಿಲ್ಲಾ ಕೆಡಿಪಿ ಸದಸ್ಯ ಶಿವು ಕೋಟರಗಸ್ತಿ, ತಾಲೂಕು ಕೆಡಿಪಿ ಸದಸ್ಯ ನಿಂಗು ಬುಳ್ಳಾ, ರಮೇಶ ಗುಬ್ಬೇವಾಡ, ಗ್ಯಾರಂಟಿ ಯೋಜನೆ ಸಮಿತಿ ಸದಸ್ಯ ರವಿರಾಜ ದೇವರಮನಿ, ಸಿದ್ದಲಿಂಗ ಗುಡ್ಡಾಪುರ, ಉಪಾಧ್ಯಕ್ಷ ಮಾಂತು ಮಳ್ಳಿ, ಗ್ರಾಪಂ ಸದಸ್ಯ ಶಂಕರ ತೆಲಗಾಣಿ, ಹಸನ್‌ಪಟೇಲ ಬಿರಾದಾರ, ಚೇತನಗೌಡ ಬಿರಾದಾರ, ಬಾಪೂಗೌಡ ಬಿರಾದಾರ ಶರಣು ಕೊಂಡಗೂಳಿ, ಮುತ್ತು ಮಳ್ಳಿ, ಆದ್ಯಾಯ ಹಿರೇಮಠ, ಸದ್ದಾಂ ಪಟೇಲ, ಈರಣ್ಣ ಹುಬ್ಬಳ್ಳಿ, ಶರಣಪ್ಪ ಬೋರಗಿ. ಸಂಗು ಸಿಂದಗಿ ಸೇರಿದಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು.

