ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ೧೫ನೇ ಹಣಕಾಸು ಯೋಜನೆಯಡಿ ವಾರ್ಡಿನ ಸಿ.ಸಿ ರಸ್ತೆ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ ಹೇಳಿದರು.
ಪಟ್ಟಣದ ಹೊಸನಗರದ ೧೩ನೇ ವಾಡಿನಲ್ಲಿ ೩.೫ಲಕ್ಷ ರೂ.ಗಳ ವೆಚ್ಚದ ೭೫ ಮೀ.ಉದ್ದ ಹಾಗೂ ೩.೫ ಅಗಲದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಮಾಜಿಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಹಾಗೂ ಪಟ್ಟಣ ಪಂಚಾಯಿತಿ ನೀಡಿದ ಅನುದಾನಗಳಿಂದ ವಾರ್ಡಿನಲ್ಲಿ ಈಗಾಗಲೇ ೬ ರಿಂದ೭ ರಸ್ತೆಗಳು, ೪ ಬೋರೆವೆಲ್‌ಗಳ ನಿರ್ಮಾಣ ಹಾಗೂ ವಿದ್ಯುತ್ ಕಂಬಗಳ ಅಳವಡಿಕೆ ಮಾಡಲಾಗಿದೆ.
ಇಂದು ಕಾಂಗ್ರೆಸ್ ಸರ್ಕಾರದ ಮಲತಾಯಿಧೋರಣೆಯಿಂದ ಕ್ಷೇತ್ರದ ಶಾಸಕರಿಗೆ ಹೆಚ್ಚಿನ ಅನುದಾನ ದೊರೆಯುತ್ತಿಲ್ಲ. ಇದರಿಂದ ಪಟ್ಟಣದ ಅಭಿವೃದ್ಧಿಗೆ ನಿರೀಕ್ಷಿಸಿದಷ್ಟು ಅನುದಾನ ದೊರೆಯುತ್ತಿಲ್ಲ. ನಾವು ಸಹ ಶಾಸಕರಿಗೆ ಯಾವುದೇ ಒತ್ತಡ ಹಾಕುತ್ತಿಲ್ಲ. ಅದಾಗ್ಯೂ ಪಟ್ಟಣದ ಅಭಿವೃದ್ಧಿಗೆ ಬದ್ಧರಾಗಿ ನಾವೆಲ್ಲ ಸದಸ್ಯರು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುತ್ತೇವೆ ಎಂದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ಕಾಸುಗೌಡ ಬಿರಾದಾರ(ಜಲಕತ್ತಿ), ಶಾಂತಯ್ಯ ಜಡಿಮಠ ಸಹಿತ ಬಸಪ್ಪ ದೇವಣಗಾಂವ, ಸಲಬಯ್ಯ ಸದಯ್ಯನಮಠ ಹಾಗೂ ಇತರರು ಇದ್ದರು.

