ಉದಯರಶ್ಮಿ ದಿನಪತ್ರಿಕೆ
ಇಂಡಿ: ಹುಬ್ಬಳ್ಳಿ ರೇಲ್ವೆ ವಿಭಾಗೀಯ ಮಹಾ ಪ್ರಬಂಧಕ ಮುಖಲ್ ಸರನ್ ಮಾಥುರ ಜನರಲ್ ಮ್ಯಾನೇಜರ ಅವರು ಇಂದು ವಿಜಯಪುರ ಇಂಡಿ ಮತ್ತು ಪಡನೂರ ತಡವಾಲ ಭೀಮಾ ಸೇತುವೆಯನ್ನು ವಿಕ್ಷೀಸಿದರು.
ವಿವಿಧ ಕಾರ್ಯಾಚರಣೆ ಮತ್ತು ಸುರಕ್ಷತಾ ನಿಯತಾಂಕಗಳನ್ನು ಪರಿಶೀಲಿಸಿ ಮಾರ್ಗಮಧ್ಯೆ ಭೀಮಾ ಸೇತುವೆಯನ್ನು ವಿಕ್ಷಿಸಿದರು.
ಹುಬ್ಬಳ್ಳಿಯ ರೇಲ್ವೆ ವ್ಯವಸ್ಥಾಪಕಿ ಬೇಲಾ ಮೀನಾ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಇದೇ ವೇಳೆ ಸಾರ್ವಜನಿಕರು ಮತ್ತು ರೈಲು ಅಭಿವೃದ್ದಿ ಹೋರಾಟಗಾರ ವೆಂಕಟೇಶ ಭೈರಾಮಡಗಿ ಇಂಡಿ ತಾಲೂಕಿನ ರೇಲ್ವೆ ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆಯನ್ನು ನಿವಾರಣೆ ಮಾಡಿಕೊಡಲು ಮನವಿ ಮಾಡಿದರು. ಮತ್ತು ವಂದೇ ಮಾತರಂ ರೈಲು ಸೋಲಾಪುರದಿಂದ ವಿಜಯಪುರ ವರೆಗೆ ವಿಸ್ತರಿಸಲು ಕೇಳಿಕೊಂಡರು.

