ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ‘ಪೋಷಕ-ಶಿಕ್ಷಕರ’ ಸಭೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿದ್ಯಾರ್ಥಿಗಳ ಬೌದ್ಧಿಕ ಮತ್ತು ಶೈಕ್ಷಣಿಕ ಏಳಿಗೆಯೇ ನಮ್ಮ ಮೂಲ ಧ್ಯೇಯ. ಅದಕ್ಕೆ ಪೂರಕವಾಗಿ ಎಂದೆಂದಿಗೂ ಪೋಷಕರ ಸೂಕ್ತ ಸಲಹೆ, ಸೂಚನೆಗಳು ಸ್ವಾಗತಾರ್ಹ ಎಂದು ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ದೆ ಹೇಳಿದರು.
ನಗರದ ಬಿ.ಎಲ್.ಡಿ.ಇ.ಸಂಸ್ಥೆಯ ಎಸ್.ಬಿ.ಕಲಾ ಹಾಗೂ ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ‘ಪೋಷಕ-ಶಿಕ್ಷಕರ’ ಸಭೆಯಲ್ಲಿ ಮಾತನಾಡಿದ ಅವರು, ಈ ಸಂಸ್ಥೆಯನ್ನು ಕಟ್ಟಿ ಬೆಳಸಿದ ಶ್ರೀ ಬಂಥನಾಳ ಶಿವಯೋಗಿಗಳು, ಡಾ.ಫ ಗು ಹಳಕಟ್ಟಿಯವರು ಮತ್ತು ಡಾ.ಬಿ.ಎಂ ಪಾಟೀಲ ಮಹಾನ್ ಚೇತನರು. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಇಂದು ನಾವು ನಡೆಯುತ್ತಿದ್ದೇವೆ. ಸಂಸ್ಥೆಯು ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಬಾಳಿನ ಆಶಾಕಿರಣವಾಗಿದೆ ಎಂದರು.
ಮೊದಲು ನೂತನ ಆವರಣದಲ್ಲಿ ಯಾವುದೇ ಗಿಡಮರಗಳಿಲ್ಲದೆ ಒಣ ಭೂಮಿ ಇತ್ತು. ಆದರೆ ಇಂದು ಸಂಸ್ಥೆಯ ಅಧ್ಯಕ್ಷರಿಂದ ಉದ್ಘಾಟಿತ ‘ಹಸಿರು ಸಿರಿ’ ಸೆಲ್‌ನಿಂದಾಗಿ ಹಸಿರುಮಯವಾಗಿದೆ. ಒಟ್ಟು ೨೦೦ ಕ್ಕಿಂತ ಅಧಿಕ ಗಿಡಗಳನ್ನು ನೆಟ್ಟು ಪೋಷಿಸಿ ಆವರಣ ಸಂಪೂರ್ಣ ಹಸಿರುಮಯಗೊಳಿಸಲಾಗಿದೆ.ಅದಕ್ಕೆ ಮಹಾವಿದ್ಯಾಲಯದ ಬೋಧಕ & ಬೋಧಕೇತರ ಸಿಬ್ಬಂದಿ ಕಾರಣ. ಹೊಸ ಆವರಣದಲ್ಲಿ ಸುಸಜ್ಜಿತವಾದ ವಿನೂತನ ಕಟ್ಟಡ ಸಂಸ್ಥೆಯು ವಿದ್ಯಾರ್ಥಿಗಳಿಗೆ ಅಗಾಧವಾದ ಜ್ಷಾನವನ್ನು ಕೊಡುತ್ತದೆ ಮಹಾವಿದ್ಯಾಲಯದಲ್ಲಿ ಸರಿಯಾದ ರೀತಿಯಲ್ಲಿ ತರಗತಿಗಳು, ಸುಸಜ್ಜಿತ ಲ್ಯಾಬ್‌ಗಳು, ಕ್ಲಾಸರೂಂ, ಅನುಭವಿ ಪ್ರಾಧ್ಯಾಪಕರಿಂದ ಒಳಗೊಂಡಿದೆ ಪೋಷಕರು ಅದ್ನು ಗಮನಿಸಿ ನಿಮ್ಮ ಮಕ್ಕಳ ಕಾಲೇಜಿಗೆ ಬರುತ್ತಾ ಇದ್ದಾರೆ ಇಲ್ಲವೋ ಗಮನಿಸಿ ಅವರ ಶೈಕ್ಷಣಿಕ ಏಳಿಗೆಗೆ ನಾವು ನೀವು ಕೈ ಜೋಡಿಸೋಣ ಎಂದು ಹೇಳಿದರು.
ಈ ವೇಳೆಯಲ್ಲಿ ಸಭೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ತಂದೆ-ತಾಯಿ ಸಂಸ್ಥೆ ಮತ್ತು ಮಹಾವಿದ್ಯಾಲಯದ ಕುರಿತಾಗಿ ಕೃತಜ್ಞತಾ ಸಮರ್ಪಿಸಿ ವಿದ್ಯಾರ್ಥಿಗಳ ಕುರಿತಾಗಿ ಸೂಕ್ತ ಸಲಹೆ ಮತ್ತು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರೊ.ಮಹಾಂತೇಶ ಜೇವೂರ ಮಾತನಾಡಿದರು.
ಈ ಸಂದರ್ಭದಲ್ಲಿ ಉಪಪ್ರಾಚಾರ್ಯ ಅನಿಲ ಬಿ. ನಾಯಕ್, ಐಕ್ಯೂಎಸಿ ನಿರ್ದೇಶಕ ಡಾ.ಪಿ.ಎಸ್.ಪಾಟೀಲ, ಪ್ರೊ.ಅಮಿತ ತೇರದಾಳೆ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿ ಪೋಷಕರು ಉಪಸ್ಥಿತರಿದ್ದರು.
ಈ ವೇಳೆಯಲ್ಲಿ ಮಹಾವಿದ್ಯಾಲಯದ ಉಪ್ರಾಚಾರ್ಯ ಡಾ ಅನೀಲ್ ಬಿ ನಾಯಕ ಕಾರ್ಯಕ್ರಮದ ಆಶಯನುಡಿಗಳನ್ನಾಡಿ ಸ್ವಾಗತಿಸಿದರು. ಡಾ.ಶ್ರೀನಿವಾಸ ದೊಡ್ಡಮನಿ ಮಹಾವಿದ್ಯಾಲಯದ ಶೈಕ್ಷಣಿಕ ಚಟುವಟಿಕೆಗಳು, ಬೋಧಕ ಮತ್ತು ವಿದ್ಯಾರ್ಥಿಗಳಿಗೆ ಸಾಧನೆಯನ್ನು ಸಂಕ್ಷಿಪ್ತವಾಗಿ ಓದಿದರು. ಪ್ರೊ.ಸಿ ಎನ್ ಕುನ್ನೂರ ಕಾರ್ಯಕ್ರಮ ನಿರೂಪಿಸಿದರು. ಡಾ.ಪಿ ಎಸ್ ಪಾಟೀಲ ವಂದಿಸಿದರು.

