ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣವಾಗಿದೆ. ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸಲು ಯೋಜನೆಗಳು ಅನುಕೂಲಕರವಾಗಿವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ ಹೇಳಿದರು.
ತಾಲೂಕಿನ ಡೋಣೂರು ಗ್ರಾಮದಲ್ಲಿ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಶುಕ್ರವಾರ ಹಮ್ಮಿಕೊಂಡಿದ್ದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾತನಾಡಿದ ಅವರು, ಜನರು ಪಂಚಗ್ಯಾರಂಟಿ ಯೋಜನೆಗಳ ಪ್ರಯೋಜನ ಮಾಡಿಕೊಳ್ಳಬೇಕೆಂದರು.
ಗ್ಯಾರಂಟಿ ಯೋಜನೆ ತಾಲೂಕ ಅಧ್ಯಕ್ಷ ಮಹಿಬೂಬ್ ನಾಯ್ಕೋಡಿ ಮಾತನಾಡಿ, ಎಲ್ಲ ಫಲಾನುಭವಿಗಳಿಗೆ ಅಧಿಕಾರಿಗಳು ಗ್ಯಾರಂಟಿ ಯೋಜನೆಗಳು ಮುಟ್ಟಿಸುವಂತೆ ಕ್ರಮವಹಿಸಬೇಕು. ಯೋಜನೆಗಳು ಅರ್ಹರ ಮನೆ ತಲುಪದಿದ್ದಲ್ಲಿ ಅದಕ್ಕೆ ಸಂಬಂಧಿತ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದರು.
ಸಭೆಯಲ್ಲಿ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ರುಕ್ಮಿಣಿ ರಾಥೋಡ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ದೇಸಾಯಿ, ಡೋಣೂರು ಗ್ರಾಮದ ಪಿಡಿಒ ರಾಜೇಶ್ವರಿ ಪಾಟೀಲ, ಡೋಣೂರು ಗ್ರಾಮದ ಮುಖಂಡರಾದ ಮಲ್ಲಿಕಾರ್ಜುನ ಪಡಗಾನೂರ, ಯುವರಾಜ ಪಡಗಾನೂರ, ಬಸವರಾಜ ಮಸಳಿ, ಪರಶುರಾಮ ಜ್ಯೋತಿ, ಮಹಿಬೂಬ್ ಹಿಪ್ಪರಗಿ, ಶಂಕ್ರಪ್ಪ ಹುಲ್ಲೂರ, ಗ್ಯಾರಂಟಿ ಯೋಜನೆಯ ತಾಲೂಕು ಸದಸ್ಯರಾದ ಮಹಾಂತೇಶ ತಳೆವಾಡ, ಬಂಡೆಪ್ಪ ನಾಟಿಕರ, ಶಂಕರ ಚಕ್ರಮನಿ, ಕವಿತಾ ಮನೋರಮಠ, ಮಲ್ಲನಗೌಡ ಕೋಳೂರು, ಅಭಿಷೇಕ ಪಾಟೀಲ ಇತರರು ಇದ್ದರು. ಸಂಗಮೇಶ ಮಿರಗಿ ನಿರೂಪಿಸಿ. ವಂದಿಸಿದರು.

