ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹಿಂದುತ್ವದ ಫೈಯರ ಬ್ರ್ಯಾಂಡ್, ಗೋ ರಕ್ಷಕರು ಹಾಗೂ ನಗರ ಶಾಸಕ ಬಸನಗೌಡ ಆರ್ ಪಾಟೀಲ (ಯತ್ನಾಳ) ಅವರಿಗೆ ಇತ್ತೀಚೆಗೆ “ಸರ್ ತನ್ ಸೆ ಜುದಾ’ ಮಾಡುವುದಾಗಿ ಹಾಗೂ ಅವರ ಮನೆಗೆ ಮುತ್ತಿಗೆ ಹಾಕುವುದಾಗಿ ಹೇಳಿರುವ ೨:೦೯ ನಿಮಿಷದ ವಾಟ್ಸಪ್ ರೆಕಾರ್ಡಿಂಗ ಸಾರ್ವಜನಿಕ ವಲಯದಲ್ಲಿ ಹರಿದಾಡಿ ನಗರದ ಜನತೆ ಹಾಗೂ ರಾಜ್ಯಾದ್ಯಂತ ಇರುವ ಮಾನ್ಯ ಶಾಸಕರ ಅಸಂಖ್ಯಾತ ಅಭಿಮಾನಿಗಳು ಹಾಗೂ ಹಿತೈಷಿಗಳಿಗೆ ತೀವ್ರ ಕಳವಳವನ್ನುಂಟು ಮಾಡಿದೆ ಕಾರಣ ಪ್ರಧಾನ ಮಂತ್ರಿಗಳಿಗೆ, ಕೇಂದ್ರ ಗೃಹ ಮಂತ್ರಿಗಳಿಗೆ ಹಾಗೂ ಕೇಂದ್ರ ಗೃಹ ಕಾರ್ಯದರ್ಶಿಗಳಿಗೆ ಪತ್ರದ ಮುಖಾಂತರ ಮಾನ್ಯ ಶಾಸಕರಿಗೆ ಜೀವ ಬೆದರಿಕೆ ಇರುವ ಕಾರಣ ಬಸನಗೌಡ ಆರ್ ಪಾಟೀಲ (ಯತ್ನಾಳ) ಇವರಿಗೆ ವಾಯ್+ ದರ್ಜೆಯ ಭದ್ರತೆ ಒದಗಿಸುವಂತೆ ಹಾಗೂ ಈಗಾಗಲೇ ಸ್ಥಳಿಯ ಪೋಲಿಸ್ ಠಾಣೆಯಲ್ಲಿ ಈ ಪ್ರಕರಣದ ಕುರಿತು ದೂರು ಸಹ ದಾಖಲಿಸಲಾಗಿದೆ. ಈ ಪ್ರಕರಣವನ್ನು ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಯಾದ ಎನ್‌ಆಯ್‌ಎ ಮುಖಾಂತರ ದೂರು ದಾಖಲಿಸಿ ತನಿಖೆ ನಡೆಸುವಂತೆ ಮಹನಗರ ಪಾಲಿಕೆ ಸದಸ್ಯ ರಾಜಶೇಖರ ಕುರಿಯವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

