ಶ್ರೀನಗರದ ಫಾಲ್ಗಾಮ್‌ನಲ್ಲಿ ನಡೆದ ಉಗ್ರರ ಕೃತ್ಯ ಹಾಗೂ ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ್ದಕ್ಕೆ ಖಂಡನೆ
ಉದಯರಶ್ಮಿ ದಿನಪತ್ರಿಕೆ
ಇಂಡಿ: ಶ್ರೀನಗರದ ಫಾಲ್ಗಾಮ್‌ನಲ್ಲಿ ನಡೆದ ಉಗ್ರರ ಕೃತ್ಯ ಹಾಗೂ ಬೀದರ ಮತ್ತು ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷೆ ಸಂದರ್ಭದಲ್ಲಿ ಜನಿವಾರ ತೆಗೆಸಿದ ಪ್ರಕರಣ ಖಂಡಿಸಿ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಬ್ರಾಹ್ಮಣ, ಬಡಿಗೇರ, ಪತ್ತಾರ, ಮರಾಠಾ ಸಮಾಜದ ಮುಖಂಡರು ಗುರುವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ ಬಿ.ಎಸ್. ಕಡಕಬಾವಿ ಅವರಿಗೆ ಮನವಿ ಸಲ್ಲಿಸಿದರು.
ಆಧ್ಯಾ ಜಾಗೀರದಾರ, ಬಾಳು ಮುಳಜಿ, ಯಮನಾಜಿ ಸಾಳುಂಕೆ, ಗುರುನಾಥ ಜೋಶಿ, ರಮೇಶ ಪೋದ್ದಾರ ಮಾತನಾಡಿ, ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿ ಖಂಡನೀಯವಾದದ್ದು, ಉಗ್ರರನ್ನು ಸಾರ್ವಜನಿಕವಾಗಿ ಹತ್ಯೆ ಮಾಡಲು ಸರಕಾರ ಮುಂದಾಗಬೇಕು. ಬೀದರ್, ಶಿವಮೊಗ್ಗದಲ್ಲಿ ಜನಿವಾರ ತೆಗೆದ ಪ್ರಕರಣದ ಹಿಂದಿನ ವ್ಯಕ್ತಿಗಳನ್ನು ಗುರುತಿಸಿ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಶೀಲವಂತ ಉಮರಾಣಿ, ಮಲ್ಲಿಕಾರ್ಜುನ ಕಿವುಡೆ, ಜಗದೀಶ ಕ್ಷತ್ರಿ, ಸಂತೋಶ ಪಾಟೀಲ, ವಿಜಯಲಕ್ಷ್ಮಿ ರೂಗಿಮಠ, ಶಾಂತು ಧನಶೆಟ್ಟಿ, ದೇವೆಂದ್ರ ಕುಂಬಾರ, ಚೇತನ್ ಧನಶೆಟ್ಟಿ, ಅನಿಲ್ ಜೋಶಿ, ವೆಂಕಟೇಶ ಕುಲಕರ್ಣಿ, ಸೋಮು ನಿಂಬರಗಿಮಠ, ಕುಮಾರ ಪೋದ್ದಾರ, ಅಜಿತ್ ಧನಶೆಟ್ಟಿ, ಶ್ರೀಧರ ಪತ್ತಾರ, ಶರಣಗೌಡ ಬಂಡಿ, ಸಂತೋಶ ಗವಳಿ, ಶಿವು ಬಡಿಗೇರ, ಪಿ.ಜಿ. ನಾಡಪುರೋಹಿತ್ ಸೇರಿದಂತೆ ಇನ್ನಿತರರು ಇದ್ದರು.

