ಉದಯರಶ್ಮಿ ದಿನಪತ್ರಿಕೆ
ಇಂಡಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಉಗ್ರ ಕೃತ್ಯವನ್ನು ಖಂಡಿಸಿ ಅಭಾವಿಪ ಕಾರ್ಯಕರ್ತರು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ದುಷ್ಕೃತ್ಯವೆಸಗಿದ ಉಗ್ರರನ್ನು ಸಾರ್ವಜನಿಕವಾಗಿ ಶಿಕ್ಷೆಗೆ ಗುರಿಪಡಿಸಬೇಕೆಂದು ತಹಸೀಲ್ದಾರ ಬಿ.ಎಸ್.ಕಡಕಭಾವಿ ಅವರ ಮುಖಾಂತರ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ನಗರಘಟಕದ ಅಧ್ಯಕ್ಷ ಭೀಮನಗೌಡ ಬಗಲಿ ಮಾತನಾಡಿ, ಕಾಶ್ಮೀರದಲ್ಲಿ ಇಂತಹ ದುಷ್ಕೃತ್ಯವೆಸಗಿದ ಉಗ್ರರನ್ನು ನಮ್ಮ ಸೇನೆ ಸುಮ್ಮನೆ ಬಿಡಬಾರದು. ಅಲ್ಲಿ ಹರಿದ ಹಿಂದೂಗಳ ಒಂದೊಂದು ಹನಿ ರಕ್ತಕ್ಕೂ ಬೆಲೆ ಬರಬೇಕು. ಆ ರೀತಿಯಲ್ಲಿ ಉಗ್ರಗಾಮಿಗಳ ಹುಟ್ಟಡಗಿಸಬೇಕು ಎಂದು ಆಕ್ರೋಶ ಹೊರಹಾಕಿದರು.
ನಾಗೇಶ ಹೆಗಡ್ಯಾಳ ಮಾತನಾಡಿ, ಮನುಷ್ಯತ್ವವಿಲ್ಲದ ರಾಕ್ಷಸೀ ಕೃತ್ಯೆವೆಸಗಿದ ಉಗ್ರಗಾಮಿಗಳ ತಲೆ ತೆಗೆಯಬೇಕು. ಕೇಂದ್ರ ಸರಕಾರ ನಮ್ಮ ದೇಶದ ೨೬ ಜೀವಗಳಿಗೆ ಪ್ರತೀ ಜೀವಕ್ಕೆ ನೂರರಷ್ಟು ಉಗ್ರರನ್ನು ಹೊಡೆದುರುಳಿಸಿ ಭಾರತೀಯರಿಗೆ ಸಮಾಧಾನ ಪಡಿಸುವ ಕಾರ್ಯ ಮಾಡಬೇಕೆಂದು ಆಗ್ರಹಿಸಿದರು.
ಸುಮಾರು ಅರ್ಧ ಘಂಟೆಗೂ ಹೆಚ್ಚುಕಾಲ ಟ್ರಾಫಿಕ್ ಆಗಿ, ವಾಹನ ದಟ್ಟಣೆಯಾಗಿತ್ತು.
ಬಾಳು ಮುಳಜಿ, ಸುನೀಲಗೌಡ ಬಿರಾದಾರ, ಧರ್ಮರಾಜ ಸಾಲೋಟಗಿ, ರಾಹುಲ್ ಜಾಧವ, ಗಣೇಶ ಹಂಜಗಿ, ಸಚಿನ್ ಧಾನಗೊಂಡ, ಅರುಣ ಪೂಜಾರಿ, ಪ್ರಫುಲ್ ಕಟ್ಟೀಮನಿ, ಲಕ್ಷ್ಮಿ ಚವ್ಹಾಣ, ಭಾಗ್ಯಶ್ರೀ ಬಿರಾದರ, ಪೂಜಾ ರಾಠೋಡ, ಚೇತನ್ ಮರಡಿ, ಆದಿತ್ಯ ರಾಠೋಡ, ನಿರ್ಮಲಾ ಬಿರಾದಾರ, ಭಾಗ್ಯಶ್ರೀ ಮೇತ್ರಿ, ಸೇರಿದಂತೆ ಮತ್ತಿತರರಿದ್ದರು.

