ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಎನ್.ಎಸ್.ಎಸ್ ಎಂದರೆ ಸೇವಾ ಮನೋಭಾವ, ಶಿಸ್ತು, ಸಮಯ ಪರಿಪಾಲನೆ, ವ್ಯಕ್ತಿತ್ವ ವಿಕಸನ, ಕಾಯಕದ ಮಹತ್ವವನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದು ಪುರಸಭೆ ಅಧ್ಯಕ್ಷ ರಹಿಮಾನ್ ಪಟೇಲ್ ಯಲ್ಗೋಡ ಹೇಳಿದರು.
ಪಟ್ಟಣದ ಶ್ರೀಮತಿ ಗಂಗೂಬಾಯಿ ಶಾಂತಗೌಡ ಪೋಲೀಸ್ ಪಾಟೀಲ್ ಮೆಮೋರಿಯಲ್ ಸರ್ಕಾರಿ ಪ್ರಥಮ ಕಾಲೇಜು ಕೆಂಭಾವಿ ಹಾಗೂ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ, ರಾಯಚೂರು ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ದೇಶ ನನಗೇನು ಕೊಟ್ಟಿದೆ ಎನ್ನುವುದಕ್ಕಿಂತ ದೇಶಕ್ಕೆ ನಾವೇನು ಕೊಡುಗೆ ಕೊಡಬೇಕು ಎಂಬ ಮನೋಭಾವ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿ ಮಾಜಿ ಸೈನಿಕ ಮಲ್ಲಣ್ಣ ಮೇಟಿ ಮಾತನಾಡಿ, ಭಾವೈಕ್ಯತೆಯ ಭಾರತ ನಿರ್ಮಾಣ ಕಾರ್ಯದಲ್ಲಿ ವಿದ್ಯಾರ್ಥಿಗಳು ಸನ್ನದ್ಧರಾಗಿ ಎಂದವರು ರಾಷ್ಟ್ರೀಯ ಸೇವಾ ಯೋಜನೆಯ ಸದುಪಯೋಗ ಪಡಿಸಿಕೊಂಡು ಸತ್ಪ್ರಜೆಗಳಾಗುವಂತೆ ಕರೆ ನೀಡಿದರು.
ಯುವ ನಾಯಕ ಅದಿತ್ಯಗೌಡ ಎಸ್. ಪೋ.ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸದ್ಗುರು ಸದಾನಂದ ಬಾಬಾ ಮಹಾರಾಜ ಮಠದ ಅರ್ಚಕ ಮಲ್ಲಣ್ಣ ಹಾಲಬಾವಿ ಗೌರವ ಉಪಸ್ಥಿತರಿದ್ದರು, ಪ್ರಾಸ್ತಾವಿಕವಾಗಿ ಎನ್. ಎಸ್.ಎಸ್ ಅಧಿಕಾರಿ ಡಾ ಸಿದ್ದಲಿಂಗ ರಾಠೋಡ್ ಪ್ರಾಸ್ತಾವಿಕ ಮಾತನಾಡಿ. ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಉದ್ದೇಶಗಳನ್ನು ಹಾಗೂ ಏಳು ದಿನಗಳ ಕಾರ್ಯಗಳ ಬಗ್ಗೆ ವಿವರಿಸಿದರು.
ಪ್ರಾಂಶುಪಾಲ ಡಾ. ನಾಗಪ್ಪ ಚಾವಲ್ಕರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಳ್ಳೇಪ್ಪಗೌಡ ಎಸ್ ಪಾಟೀಲ, ಈರಪ್ಪ ನಾಯ್ಕೊಡಿ, ಕರವೇ ಅಧ್ಯಕ್ಷ ನಿಂಗಪ್ಪ ನಾಯ್ಕೊಡಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಶಿಬಿರಾರ್ಥಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮಲ್ಲಿಕಾರ್ಜುನ ಮರಡ್ಡಿ ನಿರೂಪಿಸಿದರು. ಮಂಜುನಾಥ ಚೆಟ್ಟಿ ಸ್ವಾಗತಿಸಿದರು, ಡಾ. ಬಸಮ್ಮ ಎಸ್ ವಂದಿಸಿದರು.

