Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಜ.೧೬ರಿಂದ ಸದ್ಭಾವನಾ ಯಾತ್ರೆ, ಬಸವಾದಿ ಶರಣರ ಸಂದೇಶಗಳ ಪ್ರವಚನ

ಜ.೧೯ರಿಂದ ಪುಣ್ಯಸ್ಮರಣೋತ್ಸವ ವಿವಿಧ ಕಾರ್ಯಕ್ರಮಗಳು

ಸಪ್ತ ಶಕ್ತಿಸಂಗಮ ಮಹಿಳೆಯರನ್ನು ಜಾಗ್ರತಗೊಳಿಸುವ ಪ್ರಯತ್ನ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಎಸ್.ಎಸ್.ಎಂ.ಔಷಧ ವಿಜ್ಞಾನ ಕಾಲೇಜಿನಲ್ಲಿ ಜಿ.ಪಿ.ಸಿ.ಪಿ ಕೋರ್ಸ ಪ್ರಾರಂಭ
(ರಾಜ್ಯ ) ಜಿಲ್ಲೆ

ಎಸ್.ಎಸ್.ಎಂ.ಔಷಧ ವಿಜ್ಞಾನ ಕಾಲೇಜಿನಲ್ಲಿ ಜಿ.ಪಿ.ಸಿ.ಪಿ ಕೋರ್ಸ ಪ್ರಾರಂಭ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಬಿಎಲ್ಡಿಇ ಸಂಸ್ಥೆಯಲ್ಲಿ ದೇಶದಲ್ಲಿಯೇ ಪ್ರಥಮವಾದ ಜಿರಿಯಾಟ್ರಿಕ್ ಫಾರ್ಮಾಸ್ಯೂಟಿಕಲ್ ಕೇರ್ ಪ್ರ್ಯಾಕ್ಟೀಸ್ ಕೋರ್ಸ್

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಡಿ.ಫಾರ್ಮಾ ಕೋರ್ಸು ಮುಗಿಸಿರುವ ವಿದ್ಯಾರ್ಥಿಗಳಿಗಾಗಿ ಹಿರಿಯ ನಾಗರಿಕರ ವೃದ್ದಾಪ್ಯ ಕಾಯಿಲೆಗಳಗೆ ಔಷಧೋಪಚಾರ ಮತ್ತು ಆರೈಕೆ ಕುರಿತು ತರಬೇತಿ ನೀಡುವ ಹಾಗೂ ದೇಶದಲ್ಲಿಯೇ ಪ್ರಥಮವಾದ ಜಿರಿಯಾಟ್ರಿಕ್ ಫಾರ್ಮಾಸ್ಯೂಟಿಕಲ್ ಕೇರ್ ಪ್ರ್ಯಾಕ್ಟೀಸ್(Geriatric Pharmaceutical Care Practice – GPCP) ಕೋರ್ಸನ್ನು ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಎಸ್.ಎಂ.ಔಷಧ ವಿಜ್ಞಾನ ಮಹಾವಿದ್ಯಾಲಯ ಮತ್ತು ಸಂಶೋಧನೆ ಕೇಂದ್ರದಲ್ಲಿ ಪ್ರಾರಂಭಿಸಲಾಗಿದೆ.
ಕಾಲೇಜಿನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ರಾಷ್ಟ್ರೀಯ ಸಾಮಾಜಿಕ ರಕ್ಷಣಾ ಸಂಸ್ಥೆ, ಸಮಾಜ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಹಿರಿಯ ನಾಗರಿಕರ ವಿಭಾಗ, ಎನ್. ಸಿ. ಡಿ. ಎ. ಪಿ ಮತ್ತು ಪಿಎಂಯು ಉಪನಿರ್ದೇಶಕ ಮತ್ತು ಮುಖ್ಯಸ್ಥ ಡಾ. ಎಚ್. ಸಿ. ಶ್ರೀಧರ ಚನ್ನಕೇಶವ ರಂಗಾ ರೆಡ್ಡಿ ವರ್ಚ್ಯೂವಲ್ ಆಗಿ ಉದ್ಘಾಟಿಸಿದರು. ಇತ್ತ ನಗರದಲ್ಲಿ ಫಾರ್ಮಸಿ ಕಾಲೇಜಿನ ನಿರ್ದೇಶಕ ಡಾ. ಆರ್. ಬಿ. ಕೊಟ್ನಾಳ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಹಿರಿಯ ನಾಗರಿಕರ ವಿಭಾಗದ ಮುಖ್ಯಸ್ಥ ಡಾ. ಆನಂದ ಪಿ. ಅಂಬಲಿ, ಹಿರಿಯರ ವೃದ್ದಾಪ್ಯ ಕಾಯಿಲೆಗಳ ನಿರ್ವಹಣೆ, ಔಷಧೋಪಚಾರ, ಆರೈಕೆ ಹಾಗೂ ಆಪ್ತ ಸಮಾಲೋಚನೆ ಕುರಿತು ಕೋರ್ಸಿನಲ್ಲಿರುವ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
22 ದಿನಗಳ ಈ ಹೊಸ ಕೋರ್ಸ್ ಇದಾಗಿದ್ದು, ಡಿ. ಫಾರ್ಮ್ ಪೂರ್ಣಗೊಳಿಸಿದವರು ಇದಕ್ಕೆ ಪ್ರವೇಶ ಪಡೆಯಬಹುದಾಗಿದೆ. ಈ ಕೋರ್ಸು ಡಿ. ಫಾರ್ಮಾ ವಿದ್ಯಾರ್ಥಿಗಳ ಪಠ್ಯದಲ್ಲಿ ಕಲಿಯುವ ವಿಷಯಗಳ ಹೊರತಾದ ವಿಷಯವನ್ನು ಒಳಗೊಂಡಿದೆ. ಹಿರಿಯ ನಾಗರಿಕರಲ್ಲಿ ಎದುರಾಗುವ ವೃದ್ದಾಪ್ಯದ ಕಾಯಿಲೆಗಳು, ರೋಗಿಗಳ ಮನಸ್ಥಿತಿ, ಅವರಲ್ಲಿ ಔಷಧ ಮತ್ತು ಆಹಾರ ಸೇವನೆ ಬಗ್ಗೆ ನೀಡಬೇಕಿರುವ ತಿಳುವಳಿಕೆ ಹಾಗೂ ನಿರ್ವಹಣೆಯ ಕುರಿತು ವಿದ್ಯಾರ್ಥಿಳಿಗೆ ಸಂಪೂರ್ಣ ಪ್ರಾಯೋಗಿಕ ಮಾಹಿತಿ ಒದಗಿಸುತ್ತದೆ. ಅಲ್ಲದೇ, ಹಿರಿಯ ನಾಗರಿಕರ ಆರೋಗ್ಯಕ್ಕಾಗಿ ಸರಕಾರ ಮತ್ತು ಸ್ವಯಂ ಸೇವಾ ಸಂಸ್ಥೆಗಳು ರೂಪಿಸಿರುವ ಯೋಜನೆಗಳ ಬಗ್ಗೆಯೂ ಕೋರ್ಸಿನ ಅವಧಿಯಲ್ಲಿ ಶಿಕ್ಷಣ ನೀಡಲಾಗುವುದು. ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ವೃದ್ಧಾಪ್ಯದ ಕಾಯಿಲೆಗಳ ಚಿಕಿತ್ಸೆ ವಿಭಾಗ ಕಾರ್ಯ ನಿರ್ವಹಿಸುತ್ತಿದೆ. ಮುಂಬರುವ ದಿನಗಳಲ್ಲಿ ಇನ್ನೂ ಅನೇಕ ವಿಷಯಗಲ್ಲಿ ವಿಶೇಷ ತರಬೇತಿ ಆರಂಭಿಸುವ ಉದ್ದೇಶವಿದೆ ಎಂದು ಅವರು ತಿಳಿಸಿದರು.
ಡಾ. ಆರ್. ಬಿ. ಕೋಟ್ನಾಳ ಮಾತನಾಡಿ, ಹಿರಿಯ ನಾಗರಿಕರ ಆರೋಗ್ಯ ಸೇವೆಯಲ್ಲಿ ಔಷಧಶ ತಜ್ಞರು ಸಹಭಾಗಿತ್ವ ಅಗತ್ಯವಾಗಿದ್ದು, ಕಾಲೇಜಿನಲ್ಲಿ ಈಗಿನಿಂದಲೇ ತರಬೇತಿ ನೀಡುತ್ತಿರುವುದು ಬಹಳ ಉಪಯುಕ್ತವಾಗಿದೆ ಎಂದು ಹೇಳಿದರು.
ವರ್ಚ್ಯೂವಲ್ ಆಗಿ ಕಾರ್ಯಕ್ರಮ ಉದ್ಘಾಟಿಸಿದ ಡಾ. ಎಚ್. ಸಿ. ಶ್ರೀಧರ ರೆಡ್ಡಿ ಮಾತನಾಡಿ, ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಹಿರಿಯ ನಾಗರಿಕರ ಚಿಕಿತ್ಸೆ ವಿಭಾಗ ಮತ್ತು ಫಾರ್ಮಸಿ ಕಾಲೇಜು ದೇಶದಲ್ಲಿಯೇ ಮೊದಲ ಬಾರಿಗೆ ಈ ವಿಶೇಷ ಕೋರ್ಸನ್ನು ಪ್ರಾರಂಭಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಅಲ್ಲದೇ, ಇದು ಹಿರಿಯ ನಾಗರಿಕರ ಆರೋಗ್ಯದ ಬಗ್ಗೆ ಬಿ.ಎಲ್.ಡಿ.ಇ ಡೀಮ್ಡ್ ವಿವಿ ಹೊಂದಿರುವ ಕಾಳಜಿಗೆ ಸಾಕ್ಷಿಯಾಗಿದೆ ಎಂದು ಅಭಿನಂದನೆ ಸಲ್ಲಿಸಿದರು.
ಜೆರಿಯಾಟ್ರಿಕ್ ಸೊಸೈಟಿ ಆಫ್ ಇಂಡಿಯಾ ಪ್ರಧಾನ ಕಾರ್ಯದರ್ಶಿ ಮತ್ತು ಖ್ಯಾತ ಜೆರಿಯಾಟ್ರಿಷಿಯನ್ ಡಾ. ಓ. ಪಿ. ಶರ್ಮಾ ಮಾತನಾಡಿ, ಜೆರಿಯಾಟ್ರಿಕ್ ಸೊಸೈಟಿ ಆಫ್ ಇಂಡಿಯಾ ಈ ಹೊಸ ಕೋರ್ಸಿಗೆ ಮಾನ್ಯತೆ ನೀಡಿದೆ ಎಂದು ಘೋಷಿಸಿದರು.
ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಡಾ ಮಲ್ಲಿಕಾರ್ಜುನ ಶೆಟ್ಟಿ ಮತ್ತು ಫಾರ್ಮಸಿ ಪ್ರ್ಯಾಕ್ಟಿಸ್ ವಿಭಾಗದ ಡಾ. ಎಸ್. ಜೆಡ್. ಇನಾಮದಾರ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಡಾ. ಸುಶೀಲಕುಮಾರ ಪಿ. ಎಲ್., ಡಾ. ಮಲ್ಲಿನಾಥ ವಿ. ಪಿ., ಡಾ. ಸುನಂದಾ ಪಿ. ಎನ್., ಬೋಧಕ ಸಿಬ್ಬಂದಿ, ಡಿ. ಫಾರ್ಮಾ ವಿದ್ಯಾರ್ಥಿಗಳು, ಸಂಶೋಧನೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಜ.೧೬ರಿಂದ ಸದ್ಭಾವನಾ ಯಾತ್ರೆ, ಬಸವಾದಿ ಶರಣರ ಸಂದೇಶಗಳ ಪ್ರವಚನ

ಜ.೧೯ರಿಂದ ಪುಣ್ಯಸ್ಮರಣೋತ್ಸವ ವಿವಿಧ ಕಾರ್ಯಕ್ರಮಗಳು

ಸಪ್ತ ಶಕ್ತಿಸಂಗಮ ಮಹಿಳೆಯರನ್ನು ಜಾಗ್ರತಗೊಳಿಸುವ ಪ್ರಯತ್ನ

ಚಿನ್ನದಂಗಡಿ ವರ್ತಕನ ಮೇಲೆ ಪೊಲೀಸರಿಂದ ವಿನಾಕಾರಣ ಹಲ್ಲೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಜ.೧೬ರಿಂದ ಸದ್ಭಾವನಾ ಯಾತ್ರೆ, ಬಸವಾದಿ ಶರಣರ ಸಂದೇಶಗಳ ಪ್ರವಚನ
    In (ರಾಜ್ಯ ) ಜಿಲ್ಲೆ
  • ಜ.೧೯ರಿಂದ ಪುಣ್ಯಸ್ಮರಣೋತ್ಸವ ವಿವಿಧ ಕಾರ್ಯಕ್ರಮಗಳು
    In (ರಾಜ್ಯ ) ಜಿಲ್ಲೆ
  • ಸಪ್ತ ಶಕ್ತಿಸಂಗಮ ಮಹಿಳೆಯರನ್ನು ಜಾಗ್ರತಗೊಳಿಸುವ ಪ್ರಯತ್ನ
    In (ರಾಜ್ಯ ) ಜಿಲ್ಲೆ
  • ಚಿನ್ನದಂಗಡಿ ವರ್ತಕನ ಮೇಲೆ ಪೊಲೀಸರಿಂದ ವಿನಾಕಾರಣ ಹಲ್ಲೆ
    In (ರಾಜ್ಯ ) ಜಿಲ್ಲೆ
  • ಆರೋಗ್ಯ ರಕ್ಷಾ ಸಮಿತಿಗೆ ನಾಮನಿರ್ದೇಶಿತ ಸದಸ್ಯರ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಸಾಂಪ್ರದಾಯಿಕ ರೀತಿಯಲ್ಲಿ ಸಂಕ್ರಾಂತಿ ಹಬ್ಬ ಆಚರಣೆ
    In (ರಾಜ್ಯ ) ಜಿಲ್ಲೆ
  • ಶರಣ ವಚನ ಸಾಹಿತ್ಯ ಮನುಕುಲಕ್ಕೆ ದಾರಿದೀಪ
    In (ರಾಜ್ಯ ) ಜಿಲ್ಲೆ
  • ವಿದ್ಯಾರ್ಥಿಗಳು ಮಾದರಿಯ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು :ಶಾಂತಾ
    In (ರಾಜ್ಯ ) ಜಿಲ್ಲೆ
  • ರಾಜಕೀಯ ಜಾಗೃತಿ ಮೂಡಿಸಲು ‘ಬಸವ ಶಕ್ತಿ’ ಸಮಾವೇಶ
    In (ರಾಜ್ಯ ) ಜಿಲ್ಲೆ
  • ರೈತರ ಪಂಪ್ ಸೆಟ್ಟುಗಳಿಗೆ ಅಕ್ರಮ-ಸಕ್ರಮ ಯೋಜನೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.