ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ತಾಲೂಕಿನ ಜಂಬಗಿ ಗ್ರಾಮದ ಬಳಿ ಲಿಂಗದಕಟ್ಟಿ ಜಮೀನಿನಲ್ಲಿ ಕಟ್ಟಿರುವ ಜರಸಿ ಆಕಳ ಮೇಲೆ ತಡರಾತ್ರಿಯಲ್ಲಿ ಯಾವುದೋ ಕಾಡು ಪ್ರಾಣಿ ದಾಳಿ ಮಾಡಿ ತಿಂದು ಸಾಯಿಸಿದ್ದು. ಪಕ್ಕದ ಗ್ರಾಮಗಳಲ್ಲಿ ಚಿರತೆಯ ಹಾವಳಿ ಇರುವ ಕಾರಣ ಚಿರತೆ ತಿಂದು ಹಾಕಿತೆಂದು ಗ್ರಾಮಸ್ಥ ಶ್ರೀಶೈಲ ಸಿದ್ದಪ್ಪ ನ್ಯಾಮಗೌಡ ತಿಳಿಸಿದ್ದಾರೆ.
ತಡರಾತ್ರಿಯಲ್ಲಿ ಯಾವುದೋ ಕಾಡುಪ್ರಾಣಿ ಬಂದು ಆಕಳ ಮೇಲೆ ದಾಳಿ ಮಾಡಿದ್ದು. ಆಕಳ ಮೈಮೇಲೆ ಗಾಯಗಳು ಕಾಣಿಸಿ ಕೊಂಡಿರುವ ಹಿನ್ನಲೆಯಲ್ಲಿ ಚಿರತೆಯು ದಾಳಿ ಮಾಡಲಾಗಿದೆಂದು ಗ್ರಾಮಸ್ಥರು ಹೇಳುವ ಮಾತು. ಚಿರತೆಯ ಓಡಾಟದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದನ್ನು ಕಂಡು ಗ್ರಾಮಸ್ಥರು ಭಯಬೀತಗೊಂಡಿದ್ದಾರೆ. ಕುಂಚನೂರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಸಿಸಿಟಿವಿ ಕ್ಯಾಮರಾ ಹಾಗೂ ಬೋನ್ ಅಳವಡಿಸಲಾಗಿದೆ ಎಂದು ಆರ್‌ಎಫ್‌ಓ ಕಿರಣ ರೆಡ್ಡಿ ತಿಳಿಸಿದ್ದಾರೆ.
ಇತ್ತೀಚಿಗೆ ಕುಂಚನೂರ ಗ್ರಾಮದಲ್ಲಿ ರೈತರೊಬ್ಬರಿಗೆ ರಾತ್ರಿ ಚಿರತೆ ಕಾಣಿಸಿಕೊಂಡಿದ್ದು, ಅವರು ಅರಣ್ಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರು. ಚಿರತೆ ಹೆಜ್ಜೆ ಗುರುತುಗಳನ್ನು ಪತ್ತೆಹಚ್ಚಿ ಬೋನ್ ಅಳವಡಿಸಿಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಶೀಘ್ರ ಹಿಡಿಯಬೇಕು ಎಂದು ಲಿಂಗದಕಟ್ಟಿ ರೈತ ಶೇಖರ ನ್ಯಾಮಗೌಡ ಒತ್ತಾಯಿಸಿದರು.
ಜಂಬಗಿ ಸೇತುವೆ ಹತ್ತಿರ ಲಿಂಗದಕಟ್ಟಿ ಜಮೀನಿನಲ್ಲಿ ಕಟ್ಟಿರುವ ಜರಸಿ ಆಕಳ ಮೇಲೆ ಯಾವುದೋ ಕಾಡು ಪ್ರಾಣಿ ದಾಳಿ ಮಾಡಿ ತಿಂದು ಸಾಯಿಸಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪಶುವೈದ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

