ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಇತ್ತೀಚೆಗೆ ಕಲಕೇರಿಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಡಾ ಬಾಬಾಸಾಹೇಬ ಅಂಬೇಡ್ಕರರ 134ನೇ ಜಯಂತೋತ್ಸವ ಮತ್ತು ಸಂವಿಧಾನ ಶಿಲ್ಪಿ ಡಾ ಅಂಬೇಡ್ಕರ್ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಲಮೇಲದ ವೈದ್ಯ ಸಾಹಿತಿ ಡಾ ಸಮೀರ ಹಾದಿಮನಿ ಅವರನ್ನು ಸಂಕೀರ್ಣ ಕ್ಷೇತ್ರದಲ್ಲಿ ಖ್ಯಾತ ನೇತ್ರ ತಜ್ಞ ಡಾ ಪ್ರಭುಗೌಡ ಪಾಟೀಲ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿದರು.
ಶ್ರೀ ಮಡಿವಾಳೇಶ್ವರ ಶಿವಾಚಾರ್ಯರು , ಭಂತೆ ಅಮರಜ್ಯೋತಿ ಸಾನಿಧ್ಯ ವಹಿಸಿದ್ದರು. ವಿದ್ವಾಂಸ ಡಾ ಎಚ್ ಟಿ ಪೋತೆ , ಪ್ರೋ ಸುಜಾತಾ ಚಲವಾದಿ, ದಲಿತ ಮುಖಂಡ ವೈ ಸಿ ಮಯೂರ, ಶ್ರೀನಾಥ್ ಪೂಜಾರಿ, ಡಿಎಸ್ಎಸ್ ಸಂಚಾಲಕ ಸೋಮಶೇಖರ್ ಬಡಿಗೇರ ಮುಂತಾದ ಗಣ್ಯರು ಉಪಸ್ಥಿತರಿದ್ದರು.

