ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇತ್ತೀಚೆಗೆ ಸಿ.ಇ.ಟಿ ಪರೀಕ್ಷೆಯಲ್ಲಿ ಶಿವಮೊಗ್ಗ ಮತ್ತು ಬೀದರನಲ್ಲಿ ವಿಪ್ರ ಸಮಾಜದ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿ ಪರೀಕ್ಷೆಗೆ ಹಾಜರಾಗುವಂತೆ ಮಾಡಿದ ಕುಕೃತ್ಯವನ್ನು ಖಂಡಿಸಿ ಬ್ರಾಹ್ಮಣ ಸಮಾಜ ಹಾಗೂ ವಿವಿಧ ಸಮಾಜದ ಹಲವು ಸಂಘಟನೆಗಳು ಜಿಲ್ಲಾ ವಕೀಲರ ಸಂಘದ ಸಹಯೋಗದೊಂದಿಗೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಭಾವಸಾರ ಕ್ಷತ್ರೀಯ ಸಮಾಜದ ಅಧ್ಯಕ್ಷ ರಾಜೇಶ ದೇವಗಿರಿ ಮಾತನಾಡಿ, ನಮ್ಮ ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತ ಕೆಲಸವನ್ನು ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಮಾಡಿದ್ದು, ಈ ಹೇಯಕೃತ್ಯ ಎಂದು ಆರೋಪಿಸಿ ತಪ್ಪಿತಸ್ಥತ್ತರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇನ್ನೂವರೆಗೂ ಈ ವಿಷಯಕ್ಕೆ ಸಂಬಂಧಪಟ್ಟಂತೆ ಏನೂ ಪ್ರತಿಕ್ರಿಯೆ ನೀಡಿಲ್ಲ. ಇದನ್ನು ನೋಡಿದರೆ ಅವರ ಬೆಂಬಲ ಈ ರೀತಿ ವರ್ತಿಸಿದ ತಪ್ಪಿತಸ್ಥರನ್ನು ಬಚಾವು ಮಾಡುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಕಾಣುತ್ತದೆ. ಸರ್ಕಾರವು ಈ ಸಮಸ್ಯೆಯನ್ನು ಶೀಘ್ರ ಪರಿಹರಿಸದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ದಲಿತ ಸಮಾಜದ ಯುವ ಮುಖಂಡ ಪುನಿತ ಕಾಂಬಳೆ ಮಾತನಾಡಿ, ನಾವು ದಲಿತ ಸಮಾಜದವರು ಸನಾತನಿಗಳಿಗೆ ಎಲ್ಲಿಯೂ ಅನ್ಯಾಯವಾದರೂ ನಾವು ಅವರ ಬೆಂಬಲಕ್ಕೆ ನಿಲ್ಲುತ್ತೇವೆ ಎಂದರು.
ಶ್ರೀ ರಾಮನವಮಿ ಉತ್ಸವ ಸಮಿತಿಯ ಅಧ್ಯಕ್ಷ ಉಮೇಶ ವಂದಾಲ ಮಾತನಾಡಿ, ಬ್ರಾಹ್ಮಣ ಸಮಾಜ ಯಾವತ್ತೂ ಸಹಿಷ್ಣರು. ಶಿವಮೊಗ್ಗ ಹಾಗೂ ಬೀದರದಲ್ಲಿ ನಡೆದ ಇಂತಹ ಅಪರಾಧಗಳು ಮುಂದೆ ನಡೆದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ನೀಲಕಂಠ ಕಂದಗಲ್, ವಿಜಯ ಚವ್ಹಾಣ, ರಾಹುಲ ಜಾಧವ, ಶ್ರೀಕಾಂತ ಕುಂದನಗಾರ, ಸೋಮನಾಥ ಕಳ್ಳಿಮನಿ, ಅಡಿವೆಪ್ಪ ಸಾಲಗಲ್ಲ, ಕೃಷ್ಣಭಟ ಗಲಗಲಿ, ಶ್ರೀಹರಿ ಗೊಳಸಂಗಿ, ನಾಗರಾಜ ಲಂಬು, ಲಕ್ಷ್ಮೀಕಾಂತ ಕುಲಕರ್ಣಿ, ವೆಂಕಟೇಶ ಜೊಶಿ, ದತ್ತಾ ಕುಲಕರ್ಣಿ, ಗಿರಿಶ ಕುಲಕರ್ಣಿ, ವಕೀಲರಾದ ಎಸ್.ಎಂ. ಸೋಲ್ಲಾಪಟ್ಟಿ, ಸಂಜೀವ ಜಹಾಗೀರದಾರ, ಎಸ್.ವಿ. ಜಹಾಗೀರದಾರ, ಆರ್.ಎಂ. ಕುಲಕರ್ಣಿ, ಬಿಂದುಮಾಧವ ಕಾಸನೀಸ, ವಿದ್ಯಾಧರ ಜೋಶಿ, ಪಾಪುಸಿಂಗ ರಜಪೂತ, ಉಮೇಶ ವಂದಾಲ, ಮುಕುಂದ ಕುಲಕರ್ಣಿ, ಸುನೀಲ ಬೈರೋಡಗಿ, ಭೀಮರಾಯ ಜಿಗಜಿಣಗಿ, ರೂಪಸಿಂಗ ಓಲೇಕಾರ, ಪ್ರದೀಪ ಸೋನಾರ, ಪ್ರಭಾಕರ ಭೋಸಲೆ, ಎನ್.ವಿ. ಕುಲಕರ್ಣಿ, ಗೋವಿಂದ ಜೋಶಿ, ವಿಜಯ ಜೋಶಿ, ದತ್ತಾತ್ರೇಯ ಜೋಶಿ ಸೇರಿದಂತೆ ಅನೇಕರಿದ್ದರು.

