ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ತಾಲೂಕಿನ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಮತ್ತು ಗ್ರಾಮ ಲೆಕ್ಕಧಿಕಾರಿಗಳ ಸಭೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಕುರಿತು ಚರ್ಚಿಸಲಾಯಿತು.
ಕಸಾಪ ತಾಲ್ಲೂಕು ಅಧ್ಯಕ್ಷ ಎಸ್ ಜಿ ಲಕ್ಕುಂಡಿಮಠ ಮಾತನಾಡಿ, ಸಾಹಿತ್ಯ ಸಮ್ಮೇಳನ ರಾಜ್ಯಕ್ಕೆ ಮಾದರಿಯಾಗಬೇಕಾಗಿದೆ ಎಂದು ತಿಳಿಸಿದ ಅವರು ಅಧಿಕಾರಿಗಳು ತಮ್ಮ ತನು ಮನ ಧನದಿಂದ ಸಹಕರಿಸಿ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಲು ನಿಮ್ಮೆಲ್ಲರ ಸಹಾಯ ಸಹಕಾರ ಅಗತ್ಯ ಎಂದರು.
ತಿಕೋಟಾ ತಹಶೀಲ್ದಾರ್ ಮತ್ತು ಸಚಿವ ಎಂ ಬಿ ಪಾಟೀಲ ಆಪ್ತ ಸಹಾಯಕ ಭೋಸಲೆ ಭಾಗವಹಿಸಿದ್ದರು.
ಬಾಬುರಾವ್ ಮಹಾರಾಜರು, ಸುರೇಶಗೌಡ ಚಾವರ ಮತ್ತು ತಾಲೂಕಿನ ಎಲ್ಲ ಅಧಿಕಾರಿಗಳು ಪಾಲ್ಗೊಂಡಿದ್ದರು.