ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ನಿಷ್ಕಲ್ಮಶ ಮನಸ್ಸಿನಿಂದ ಗ್ರಾಮೀಣ ಮಟ್ಟದ ಶಾಲೆಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ತನ್ನದೇ ಆದ ಪ್ರಮುಖ ಪಾತ್ರ ವಹಿಸುತ್ತಿರುವ ಮುಂಬೈನ ಶೇಠ ತಪಿದಾಸ ತುಳಸಿದಾಸ್ ವೃಜದಾಸ ಚಾರಿಟೇಬಲ್ ಟ್ರಸ್ಟಿಗೆ ನಾವೆಲ್ಲರೂ ಧನ್ಯವಾದಗಳನ್ನು ಸಲ್ಲಿಸಬೇಕಾಗಿದೆ ಎಂದು ಕೋ-ಆರ್ಡಿನೇಟರ್ ವಿ.ಎಂ. ಸಿಂದಗಿ ಹೇಳಿದರು.
ತಾಲ್ಲೂಕಿನ ಅರಕೇರಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಪ್ರೊಜೆಕ್ಟರ್ ಮೂಲಕ ಕಾರ್ಯನಿರ್ವಹಿಸುವ ಡಿಜಿಟಲ್ ಬೋರ್ಡ್ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸಂಸ್ಥೆಯು ಮಕ್ಕಳ ಮಾನಸಿಕ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಗಳು ತಂತ್ರಜ್ಞಾನವನ್ನು ಹೆಚ್ಚಿನ ಮಟ್ಟದಲ್ಲಿ ಬಳಸಿಕೊಂಡು ದೃಕ್ ಶ್ರವಣೋಪಕರಣವಾಗಿ ಈ ಬೋರ್ಡನ್ನು ಶಿಕ್ಷಕರು ಬಳಸಬೇಕು. ಮಕ್ಕಳು ಇದರ ಸದ್ಬಳಕೆಯನ್ನು ಮಾಡಿಕೊಳ್ಳಬೇಕು. ಪರೀಕ್ಷೆಗೆ ಮಕ್ಕಳು ಸಿದ್ಧರಾಗಬೇಕು. ಉನ್ನತವಾದ ಗುರಿಯನ್ನು ಮಕ್ಕಳು ಹೊಂದಬೇಕು. ಅದಕ್ಕಾಗಿ ಸಮಯವನ್ನು ವ್ಯರ್ಥ ಮಾಡಿಕೊಳ್ಳಬಾರದು. ಜ್ಞಾನಾತ್ಮಕ ವಿಷಯಗಳಾದ ಗಣಿತ ವಿಜ್ಞಾನ ಸಮಾಜ ವಿಜ್ಞಾನಗಳನ್ನು ಭಾಷಾ ವಿಷಯಗಳ ಆಧಾರದ ಮೇಲೆ ಗಟ್ಟಿಯಾಗಿ ಕಟ್ಟಿಕೊಳ್ಳಬೇಕು ಎಂದರು.
ಸಮಯ, ವಯಸ್ಸು, ಮರಳಿ ಬರಲಾರದು. ಆದ್ದರಿಂದ ಸಮಾಜ ಸೇವೆಯನ್ನು ಮಾಡಿ ಜೀವನ ಸಾರ್ಥಕತೆ ಮಾಡಿಕೊಳ್ಳಬೇಕು. ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತವೆ. ಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಜೀವನದಲ್ಲಿ ಯಶಸ್ಸಿನ ಮೆಟ್ಟಿಲು ಹತ್ತಬೇಕು ಎಂದು ಮಾರ್ಮಿಕವಾದ ನುಡಿಗಳನ್ನು ಆಡಿದರು.
ಈ ಸಂದರ್ಭದಲ್ಲಿ ಗ್ರಾಮದ ವತಿಯಿಂದ ವಿ. ಎಂ. ಸಿಂದಗಿ ಹಾಗೂ ಅವರ ಧರ್ಮಪತ್ನಿ ಪರಿಮಳ ಸಿಂದಗಿ ದಂಪತಿಗಳನ್ನು ಸನ್ಮಾನಿಸಲಾಯಿತು.
ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪೀರ್‌ಪಟೇಲ್ ಪಾಟೀಲ್, ಮಾತನಾಡಿ ಸ್ಮಾರ್ಟ್ ಬೋರ್ಡ್ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅದರಲ್ಲೂ ಸರಕಾರಿ ಪ್ರೌಢಶಾಲೆಗಳಲ್ಲಿ ಅತಿ ಅಗತ್ಯ. ಹಿರಿಯರು, ಶಿಕ್ಷಕರು, ಪಾಲಕರು ಮಕ್ಕಳಿಗೆ ಸಂಸ್ಕಾರಗಳನ್ನು ನೀಡಿ ಅವರ ಭವಿಷ್ಯವನ್ನ ಉಜ್ವಲಗೊಳಿಸಲು ಶ್ರಮಿಸಬೇಕು ಎಂದು ಕರೆಕೊಟ್ಟರು.
ಶಾಲೆಯ ಎಸ್. ಡಿ. ಎಂ.ಸಿ ಅಧ್ಯಕ್ಷ ಎಸ್. ಎಂ. ಶಿರಾಳಶೆಟ್ಟಿ ಮಾತನಾಡಿ ಶಾಂತವಾಗಿ ಓದಿ, ಶಿಸ್ತಿನಿಂದ ಓದಿ, ಶಿಸ್ತನ್ನ ಜೀವನದ ಭಾಗವನ್ನಾಗಿ ಮಾಡಿಕೊಂಡು, ಪರೀಕ್ಷೆಗೆ ಸಿದ್ಧರಾಗಿ, ತಂದೆ- ತಾಯಿ, ಗ್ರಾಮದ ಕೀರ್ತಿಯನ್ನು ಹೆಚ್ಚಿಸಿ ಎಂದು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಎಲ್. ಟಿ. ಮುಲ್ಲಾ, ಎಸ್. ಎಸ್. ಜತ್ತಿ, ರವೀಂದ್ರ ಝಳಕಿ, ವಿನಾಯಕ ಕಾಖಂಡಕಿ, ಎಚ್. ಎಲ್. ಕುಡಚಿ , ಎಸ್. ಆರ್. ಲಾಲನನವರ್, ಎ. ಜಿ. ಪೆಂಡಾರಿ, ಮಾನಂದ ಕೋಳಕೂರ, ಅರುಂಧತಿ ಸಿಂಧೂರ್, ರೇಖಾ ನಲವಡೆ, ಭಾರತಿ ಅಲ್ಲಿ, ವಂದನಾ ವಿ. ಕೆ,ಲ. ಇದ್ದರು.
ಪ್ರವೀಣ ಮಂಗಳೂರೆ ನಿರೂಪಿಸಿದರು, ರವೀಂದ್ರ ಬೆಣ್ಣೂರ ವಂದಿಸಿದರು.